ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಬಗ್ಗೆ ತನಿಖೆಯಾಗುತ್ತಿದೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬರಲಿದೆ. ಅದರ ಆಧಾರದ ಮೇಲೆ ವೈಜ್ಞಾನಿಕವಾಗಿ ನಡೆದಿದ್ದು ಏನು ಎಂದು ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎ.16 ರ ಬೆಳಗ್ಗೆ ತಮ್ಮ ನಿವಾಸ ಮುಂದೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿನ ಗೃಹ ಸಚಿವ ಕೆ. ಜೆ. ಜಾರ್ಜ್ ವಿರುದ್ಧ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಬಂದಿದ್ದಾಗ ಆರಂಭದಲ್ಲಿ ಪೊಲೀಸರಿಗೆ ವಿಡಿಯೊ ಸಿಕ್ಕಿದ್ದರೂ, ಡೆತ್ ನೋಟ್ ಸಿಕ್ಕಿದ್ದರೂ ಕೋರ್ಟ್ ನಿಂದ ಆದೇಶ ಬಂದ ಮೇಲಷ್ಟೇ ಎಫ್ಐಆರ್ ಆಗಿತ್ತು. ಆದರೆ ನಾವು ಆರೋಪ ಕೇಳಿ ಬಂದ ತಕ್ಷಣ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲಿಸಿ ತನಿಖೆ ಮಾಡುತ್ತಿದ್ದೇವೆ ಎಂದರು.
Recent Comments
ಕಗ್ಗದ ಸಂದೇಶ
on