ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಗೆ ಭಾರತ ಸರ್ಕಾರ ಹೆಚ್ಚುವರಿ 15,200 ಕೋಟಿ ರೂ. ನೆರವು ನೀಡಲು ನಿರ್ಧರಿಸಿದೆ.
ಚೀನಾದ ಪ್ರಭಾವದಿಂದ ಶ್ರೀಲಂಕಾವನ್ನು ಹೊರತರಲು, ದ್ವೀಪ ರಾಷ್ಟ್ರಕ್ಕೆ ಇನ್ನೂ 200 ಕೋಟಿ ಡಾಲರ್ (15,200 ಕೋಟಿ ರೂ.) ಹಣಕಾಸಿನ ನೆರವು ನೀಡಲು ಭಾರತ ಸರ್ಕಾರ ಸಿದ್ಧವಾಗಿದೆ. ಸಧ್ಯ ಚೀನಾವನ್ನು ಹೆಚ್ಚಾಗಿ ಅವಲಂಬಿಸಿದ್ದ ಶ್ರೀಲಂಕಾವನ್ನು ಮರಳಿ ತನ್ನ ಪ್ರಭಾವದ ಪರಿಧಿಗೆ ತಂದುಕೊಳ್ಳಲು ಕೇಂದ್ರ ಸರ್ಕಾರ, ದ್ವೀಪ ರಾಷ್ಟ್ರಕ್ಕೆ ಅಗತ್ಯ ಆಹಾರ ಮತ್ತು ಇಂಧನ ಪೂರೈಸಲು ಮುಂದಾಗಿದೆ.
ಶ್ರೀಲಂಕಾಕ್ಕೆ ಚೀನಾವು ಸುಮಾರು 350 ಕೋಟಿ ರೂ. ಡಾಲರ್ ಸಾಲ ನೀಡಿದ್ದು, ದ್ವೀಪ ರಾಷ್ಟ್ರದಲ್ಲಿ ಬಂದರುಗಳು ಮತ್ತು ರಸ್ತೆಗಳನ್ನು ನಿರ್ಮಿಸಿದೆ. ಹೀಗಾಗಿ ಚೀನಾದ ಸಾಲ ತೀರಿಸಲು ಶ್ರೀಲಂಕಾವು ಭಾರತದ ನೆರವು ಕೇಳಿದ್ದು, ಚೀನಾದ ಮೇಲಿನ ಅವಲಂಬನೆ ತಗ್ಗಿಸಲು ಶ್ರೀಲಂಕಾಕ್ಕೆ ಅಗತ್ಯ ನೆರವು ನೀಡಲು ಬಾರತ ಸರಕಾರ ಒಪ್ಪಿಕೊಂಡಿದೆ. ಜತೆಗೆ ಪ್ರಬಲ ಪಾಲುದಾರನಾಗಿಸಿಕೊಳ್ಳಲು ಬಯಸುತ್ತಿದೆ’ ಎಂದು ಮೂಲಗಳು ಹೇಳಿದೆ.
ಶ್ರೀಲಂಕಾಗೆ 15,200 ಕೋಟಿ ರೂ. ಹೆಚ್ಚುವರಿ ನೆರವು ನೀಡಿದ ಭಾರತ
Recent Comments
ಕಗ್ಗದ ಸಂದೇಶ
on