ಕಾರ್ಕಳ : ಕಾರೊಂದು ಚಾಲಕಿಯ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮಹಿಳೆಯೋರ್ವರು ಸಾವಿಗೀಡಾದ ಘಟನೆ ಮಾಳ ಎಸ್ಕೆ ಬಾರ್ಡರ್ ಸಮೀಪ ಎ. 15ರಂದು ಸಂಭವಿಸಿದೆ. ಕಾರ್ಕಳದ ಕಾಬೆಟ್ಟು ಅಮ್ಮಣ್ಣಿ ದೇವಾಡಿಗ (75) ಎಂಬವರೇ ಮೃತಪಟ್ಟ ದುರ್ದೈವಿ. ಮಗುವಿಗೆ ಅಕ್ಷರಾಭ್ಯಾಸ ಮಾಡಿಸಲೆಂದು ಅಮ್ಮಣ್ಣಿ ಕುಟುಂಬ ಕಾರ್ಕಳದಿಂದ ಶೃಂಗೇರಿಗೆ ಕಾರಿನಲ್ಲಿ ತೆರಳುತ್ತಿರುವ ಸಂದರ್ಭ ಎಸ್ಕೆ ಬಾರ್ಡರ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಯ ತೀರಾ ಎಡಭಾಗಕ್ಕೆ ಚಲಿಸಿ ಪಲ್ಟಿಯಾಗಿದೆ. ಅಪಘಾತದಲ್ಲಿ ಅಮ್ಮಣ್ಣಿ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಕಾರ್ಕಳದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on