ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ವಾರ್ಷಿಕ ಮಹೋತ್ಸವ ಹಾಗೂ ಮನ್ಮಹಾರಥೋತ್ಸವ ಸಂದರ್ಭ ಸಚಿವ ವಿ. ಸುನೀಲ್ ಕುಮಾರ್ ಅವರ ತುಲಾಭಾರ ಸೇವೆ ಜರಗಿತು.
ಎ. 14ರಂದು ಸರೋಜಿನಿ ವಸಂತ್, ನಿಖಿಲ್ ಆಚಾರ್ಯ, ದಿನೇಶ್ ಆಚಾರ್ಯ ಸಂಕಲ್ಪಿಸಿದಂತೆ ತುಲಾಭಾರ ಸೇವೆ ನಡೆದಿದ್ದು, ಅಕ್ಕಿ, ಬೆಲ್ಲ, ತೆಂಗಿನ ಕಾಯಿಯಿಂದ ತುಲಾಭಾರ ಸೇವೆ ನೆರವೇರಿಸಲಾಯಿತು. ಸಚಿವ ಸುನೀಲ್ ಕುಮಾರ್ ಅವರ ಪತ್ನಿ ಪ್ರಿಯಾಂಕಾ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ವೇ. ಮೂ. ಬ್ರಹ್ಮಶ್ರೀ ಉಮೇಶ್ ತಂತ್ರಿ, ದೇಗುಲದ ಪ್ರಧಾನ ಅರ್ಚಕ ವಿಠಲ ಪುರೋಹಿತ್, ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ, ಪಿ. ರವಿ ಆಚಾರ್, ನಿಟ್ಟೆ ಸುರೇಶ್ ಆಚಾರ್ಯ, ಸೇವಾ ಸಮಿತಿ ಅಧ್ಯಕ್ಷ ಅಂಡಾರು ಅಶೋಕ್ ಆಚಾರ್ಯ, ಜ್ಯೋತಿ ರಮೇಶ್, ಮಹಿಳಾ ಮಂಡಲದ ಪದಾಧಿಕಾರಿಗಳು, ಪ್ರಮುಖರು, ಸಮಾಜ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.