ಕಾರ್ಕಳ : ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಶತಮಾನೋತ್ಸವದ ಪ್ರಯುಕ್ತ, ತಾಲೂಕು ರೆಡ್ ಕ್ರಾಸ್ ಘಟಕದ ವತಿಯಿಂದ ವೀಲ್ ಚಯರ್ ವಿತರಿಸುವ ಕಾರ್ಯಕ್ರಮ ಎ. 3ರಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚೇಯರ್ ಮನ್ ಡಾ. ರಾಮಚಂದ್ರ ಜ್ಯೋಶಿ, ಕಳೆದ ನಾಲ್ಕು ವರ್ಷಗಳಿಂದ ಜನರ ಆರೋಗ್ಯದ ಬಗ್ಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ನಡೆಸಿಕೊಂಡು ಬಂದಿದೆ. ರೆಡ್ ಕ್ರಾಸ್ ವೀಕ್ ಆಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿ ಅರ್ಹ ಫಲಾನುಭವಿಗಳಿಗೆ ವೀಲ್ ಚೇರ್ ಗಳನ್ನು ಉಚಿತವಾಗಿ ನೀಡಿದ್ದು, ಅದಕ್ಕೆ ತಗಲಿದ ರೂ. 50,000/- ಗಳನ್ನು ಸದಸ್ಯರು ಬರಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ದಾನಿಗಳಾದ ಮೋಹನ್ ಶೆಣೈ, ಲಕ್ಷ್ಮಣ್ ಶೆಣೈ, ಡಾ. ಸುನಿಲ್ ಕಿಣಿ, ಡಾ. ಚಂದ್ರಿಕಾ, ಚಂದ್ರಶೇಖರ್ ಹೆಗ್ಡೆ, ಮಟ್ಟಿ ಯೋಗಿಶ್ ಪ್ರಭು, ಡಾ. ರೇಣುಕ ಜ್ಯೋಶಿ, ಪ್ರಸಾದ್ ಕಾಮತ್, ಡಾ. ಜ್ಞಾನೇಶ್ ಕಾಮತ್ ಇವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಮದುಸುಧನ ನಾಯಕ್, ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್, ರೆಡ್ ಕ್ರಾಸ್ ಕುಂದಾಪುರ ಘಟಕದ ಸಭಾಪತಿ ಜಯಾಕರ ಶೆಟ್ಟಿ, ಕೋಶಾಧಿಕಾರಿ ಶಿವರಾಮ್ ಶೆಟ್ಟಿ, ರೆಡ್ ಕ್ರಾಸ್ ಕಾರ್ಕಳದ ಉಪಸಭಾಪತಿ ಶೇಖರ್ ಮತ್ತಿತರರು ಗಣ್ಯರು ಭಾಗವಹಿಸಿದರು.
ಶಿವಕುಮಾರ್ ಪ್ರಾರ್ಥಿಸಿ, ಶ್ವೇತಾ ಜೈನ್ ನಿರ್ವಹಿಸಿ, ಕಾರ್ಯದರ್ಶಿ ವೃಷಭರಾಜ್ ಕಡಂಬರು ವಂದಿಸಿದರು.
