Tuesday, May 17, 2022
spot_img
Homeಸ್ಥಳೀಯ ಸುದ್ದಿಬುಧವಾರ ಸುರಿದ ಗಾಳಿಮಳೆಗೆ ಕಾರ್ಕಳದ ಹಲವೆಡೆ ಹಾನಿ

ಬುಧವಾರ ಸುರಿದ ಗಾಳಿಮಳೆಗೆ ಕಾರ್ಕಳದ ಹಲವೆಡೆ ಹಾನಿ

ಕಾರ್ಕಳ : ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಬುಧವಾರ ಸಂಜೆ ಭಾರಿ ಗಾಳಿ ಮಳೆಯಾಗಿದ್ದು, ಕಾರ್ಕಳದ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ದುರ್ಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಡಿಲು ಬಡಿದು ಬೆಂಕಿಯಲ್ಲಿ ವೈರ್‌ಗಳು ಹೊತ್ತಿ ಉರಿದಿದೆ. ಬಂಗ್ಲೆಗುಡ್ಡೆ ನಿವಾಸಿ ರತಿ ಶೇಖರ ಪರನೀರು ಎಂಬವರ ಮನೆಗೆ ತೆಂಗಿನ ಮರವೊಂದು ಬಿದ್ದು 25 ಸಾವಿರ ರೂ. ನಷ್ಟವುಂಟಾಗಿದೆ. ಬೋಳ ಗ್ರಾಮದ ಗಿರಿಜಾ ಪೂಜಾರ್ತಿ ಅವರ ವಾಸದ ಮನೆಗೆ ಅಡಿಕೆ ಮರ‌ ಬಿದ್ದು ಅಂದಾಜು 10 ಸಾವಿರ ರೂ. ಹಾನಿಯಾಗಿದೆ.
ಮಿಯ್ಯಾರು ಗ್ರಾಮದ ಬೋರ್ಕಟ್ಟೆ ಯಶೋಧರ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಭಾಗಶ: ಹಾನಿಗೀಡಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!