Saturday, May 21, 2022
spot_img
Homeಸ್ಥಳೀಯ ಸುದ್ದಿಕಾರ್ಕಳದ ಸಚ್ಚಿದಾನಂದ ಪ್ರಭು ಬ್ರಿಗೇಡಿಯರ್‌ ಆಗಿ ಪದೋನ್ನತಿ

ಕಾರ್ಕಳದ ಸಚ್ಚಿದಾನಂದ ಪ್ರಭು ಬ್ರಿಗೇಡಿಯರ್‌ ಆಗಿ ಪದೋನ್ನತಿ

ಕಾರ್ಕಳ : ಮರ್ಣೆ ಗ್ರಾಮದ ಕಾಡುಹೊಳೆ ಸಚ್ಚಿದಾನಂದ ಪ್ರಭು ಅವರು ಭಾರತದ ರಕ್ಷಣಾ ಇಲಾಖೆಯ ಬ್ರಿಗೇಡಿಯರ್ ಹುದ್ದೆ ಅಲಂಕರಿಸಿದ್ದಾರೆ.
ಕಾಡುಹೊಳೆಯಲ್ಲಿ ಪ್ರಾಥಮಿಕ ಶಿಕ್ಷಣ, ಅಜೆಕಾರು ಜ್ಯೋತಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಎಸ್‌ಡಿಎಂ ಉಜಿರೆಯಲ್ಲಿ ಪಿಯು ಶಿಕ್ಷಣ ಪೂರೈಸಿರುವ ಪ್ರಭು ಅವರು ಉಡುಪಿ ವೈಕುಂಠ ಬಾಳಿಗಾ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿರುತ್ತಾರೆ.
1997ರಲ್ಲಿ ಭಾರತೀಯ ಭೂಸೇನೆಯಲ್ಲಿ ಅಸಿಸ್ಟೆಂಟ್ ಜಡ್ಜ್ ಅಡ್ವೊಕೇಟ್ ಜನರಲ್ ಹುದ್ದೆಗೆ ನೇಮಕಗೊಂಡಿ ಇವರು ಬಳಿಕ ಕರ್ನಲ್ ಮಿಲಿಟರಿ ಸೆಕ್ರೆಟರಿ (ಕಾನೂನು), ಡೆಪ್ಯೂಟಿ ಜಡ್ಜ್ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಭು ಅವರು ಇದೀಗ ಪದೋನ್ನತಿ ಹೊಂದಿ ಭಾರತೀಯ ಭೂಸೇನೆಯ ನ್ಯಾಯಾಂಗ ವಿಭಾಗದಲ್ಲಿ ಬ್ರಿಗೇಡಿಯರ್ ಪದವಿ ಪಡೆದ ಮೊದಲ ಕನ್ನಡಿಗರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇವರು ಕಾಡುಹೊಳೆ ಕೊಪ್ಪಲದ ದಿ। ಬಾಬುರಾಯ ಪ್ರಭು ಹಾಗೂ ರತ್ನಮ್ಮ ದಂಪತಿ ಪುತ್ರ. ಬೈಲೂರು ಜ್ಯೋತಿ ಪ್ರಭು ಇವರ ಪತ್ನಿ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!