ಹೆಬ್ರಿ : ಅಕ್ರಮವಾಗಿ ಗೋ ಸಾಗಾಟವಾಗುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗೋವುಗಳನ್ನು ರಕ್ಷಿಸಿದ ಘಟನೆ ಹೆಬ್ರಿ ತಾಲೂಕಿನ ಬ್ಯಾಣ ಎಂಬಲ್ಲಿ ನಡೆದಿದೆ.
ಮಂಗಳವಾರ ತಡರಾತ್ರಿ ಆರ್ಡಿ ಅಲ್ಬಾಡಿ ಪರಿಸರದಿಂದ 14 ದನಗಳನ್ನು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಗೋವು ಸಾಗಿಸುತ್ತಿದ್ದ ವೇಳೆ ಹೆಬ್ರಿ ಎಸ್ಐ ಸುದರ್ಶನ್ ದೊಡ್ಮನಿ ಮತ್ತು ಅವರ ತಂಡ ಬೆನ್ನಟ್ಟಿದಾಗ ಪಿಕಪ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಅಂಗಡಿ ಯೊಂದಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಮುಂದೆ ವಾಹನ ಚಲಿಸದೆ ಇದ್ದಾಗ ಆರೋಪಿಗಳು ಪಿಕ್ಅಪ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿರುತ್ತಾರೆ.
ಪಿಕಪ್ ವಾಹನ ವಶಕ್ಕೆ ಪಡೆದ ಪೊಲೀಸರು 14 ದನಗಳ ರಕ್ಷಣೆ ಮಾಡಿರುತ್ತಾರೆ. ಅದರಲ್ಲಿ 1 ದನ ಸಾವನ್ನಪ್ಪಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.
