ಚೆನ್ನೈ: ಅಮಿತ್ ಶಾ ಹೇಳಿದ ರೀತಿ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಮಲೈ ಹೇಳಿದ್ದಾರೆ.
ಅಮಿತ್ ಶಾ ಅವರ ಹಿಂದಿ ಹೇರಿಕೆಯ ಬಗ್ಗೆ ಪ್ರತಿಕ್ರಯಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ರಾಜ್ಯದಲ್ಲಿ ಹಿಂದಿ ಸಂಪರ್ಕ ಭಾಷೆಯಾಗಿಸಲು ಅವಕಾಶ ನೀಡುವುದಿಲ್ಲ. ದೇಶದಲ್ಲಿ ತಮಿಳು ಸಂಪರ್ಕ ಭಾಷೆಯಾದರೆ ಅದು ನಮಗೆ ಹೆಮ್ಮೆ. “ಇಲ್ಲಿ ಯಾರಿಗೂ ಹಿಂದಿ ಬರುವುದಿಲ್ಲ. ನನಗೆ ಕೂಡ ಹಿಂದಿ ತಿಳಿದಿಲ್ಲ. ಯಾರಿಗಾದರೂ ಅದು ಕೆಲಸ, ಶಿಕ್ಷಣ ಅಥವಾ ಉದ್ಯಮಕ್ಕೆ ಅಗತ್ಯವಾಗಿದ್ದರೆ, ಅದನ್ನು ಅವರು ಕಲಿಯಬಹುದು. ನಾವು ಭಾರತೀಯರು ಎಂದು ಸಾಬೀತುಪಡಿಸಲು ಭಾಷೆಯೊಂದನ್ನು ಕಲಿಯುವಂತೆ ನಮ್ಮನ್ನು ಯಾರೂ ಬಲವಂತಪಡಿಸುವ ಅಗತ್ಯವಿಲ್ಲ” ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ : ಕೆ. ಅಣ್ಣಮಲೈ
Recent Comments
ಕಗ್ಗದ ಸಂದೇಶ
on