ಎಳ್ಳಾರೆ: ಶ್ರೀ ಜನಾರ್ದನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಎಳ್ಳಾರೆಯ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭವು ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರೌಂಡ್ ಟೇಬಲ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಮೊರಿಯಾ ಫಿಲಿಪ್ ನೂತನ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಶಾಲಾ ಕೊಠಡಿಗಳು ಹಿಂದಿನ ಭಾರತೀಯ ಪರಂಪರೆಯನ್ನು ಸಾರುತ್ತಿದೆ. ಈ ಶಾಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷವಾದ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ರೌಂಡ್ ಟೇಬಲ್ ಇಂಡಿಯಾದ ವಿನಯ್ ಟಿ.ಆರ್, ರೊಯ್ಸ್ಟರ್ ಡಿಸೋಜಾ, ಜೆನಿಫರ್ ಫೆರ್ನಾಂಡಿಸ್,ಶ್ರೀ ಜನಾರ್ದನ ಟ್ರಸ್ಟ್ ನ ಅಧ್ಯಕ್ಷ ದಿನೇಶ್ ಕಿಣಿ,ಶಾಲಾ ಸಂಚಾಲಕ ನಂದಕುಮಾರ್ ಉಪಸ್ಥಿತರಿದ್ದರು.
