ಕಾರ್ಕಳ : ಹಿರಿಯಂಗಡಿ ಶ್ರೀಕ್ಷೇತ್ರ ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಅತಿರುದ್ರ ಮಹಾಯಾಗದ ಪ್ರಯುಕ್ತ ಎ. 13ರ ಸಂಜೆ 3.30ಕ್ಕೆ ವೈಭವದ ಹಸಿರು ಹೊರೆಕಾಣಿಕೆ ನಡೆಯಲಿದೆ. ಬಂಡೀಮಠ ಶ್ರೀ ಮೂಡುಗಣಪತಿ ದೇವಸ್ಥಾನದ ಬಳಿಯಿಂದ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಅನಂತರ ಅನಂತಶಯನ, ಆನೆಕೆರೆ ಮಾರ್ಗವಾಗಿ ಮೆರವಣಿಗೆ ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನ ತಲುಪಲಿದೆ.
ಎ. 13 : ಅತಿರುದ್ರ ಮಹಾಯಾಗದ ಅಂಗವಾಗಿ ಹಸಿರು ಹೊರೆಕಾಣಿಕೆ
