Thursday, May 19, 2022
spot_img
Homeಜಿಲ್ಲಾಸಮುದ್ರಕ್ಕೆ ಹಾರಿ ಯುವಕ ಆತ್ಮಹತ್ಯೆ

ಸಮುದ್ರಕ್ಕೆ ಹಾರಿ ಯುವಕ ಆತ್ಮಹತ್ಯೆ

ಮಂಗಳೂರು : ತನ್ನ 24 ಸಾವಿರ ಸಾಲವನ್ನು ತೀರಿಸಲಾಗದೆ ಯುವಕನೋರ್ವ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಕಾಟೀಪಳ್ಳ ನಿವಾಸಿ ಕಂಡ್ರಿಕ್ ಲಾರೆನ್ಸ್ ಡಿ’ ಸೋಜ ( 20) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮೃತ ಯುವಕನಿಗೆ ಕುಡಿತದ ಚಟವಿದ್ದು ಗೆಳೆಯರಲ್ಲಿ ಸಾಲ ಮಾಡಿಕೊಂಡಿದ್ದ. ಕೆಲಸಕ್ಕೆ ರಜೆ ಹಾಕಿದ್ದ ಯುವಕ ಎ.11ರಂದು 11.30 ಕ್ಕೆ ಮನೆಯಿಂದ ಹೊರಟು ಹೋಗಿದ್ದ. ಬಳಿಕ ಎಲ್ಲೆಡೆ ಹುಡುಕಾಡಿದಾಗ ಸಂಜೆ ಸುರತ್ಕಲ್ ಠಾಣಾ ವ್ಯಾಪ್ತಿಯ ಮಲ್ಲಮಾರ್ ಬೀಚ್ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.

ಈತ ತನ್ನ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ನಾನು ಹಲವರಿಗೆ ಹಣ ಕೊಡಲು ಬಾಕಿ ಇದೆ. ಅಮ್ಮನ ಬಂಗಾರ ಅಡವಿಟ್ಟು ತಂದ ಹಣವು ಖರ್ಚಾಯಿತು. ಹರ್ಷಿತ್ 6 ಸಾವಿರ, ಶರೊಲಿನ್ ಡಿಸೋಜ 3 ಸಾವಿರ, ಸುಧಾಕರ್ 3 ಸಾವಿರ, ಅಮ್ಮ ನಿಗೆ ( ಬಂಗಾರದ ಹಣ) 12 ಸಾವಿರ ನೀಡಬೇಕಿತ್ತು. ಸಾರಿ ಅಮ್ಮ ಮತ್ತು ಕುಟುಂಬಿಕರಿಗೆ ಎಂದು ಬರೆಯಲಾಗಿದೆ. ಸದ್ಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!