ಬೈಕ್‌ ಟೆಂಪೋಗೆ ಡಿಕ್ಕಿ : ಬೈಕ್ ಸವಾರನಿಗೆ ಗಾಯ

ಕಾರ್ಕಳ : ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಾಯಗೊಂಡ ಘಟನೆ ಎ. 11ರಂದು ಕಾರ್ಕಳ ವೆಂಕಟರಮಣ ದೇವಳದ ಬಳಿ ನಡೆದಿದೆ.
ಗ್ರಾನೈಟ್‌ ತುಂಬಿಕೊಂಡು ಕಾರ್ಕಳದಿಂದ ಹಿರಿಯಡ್ಕದ ಕಡೆಗೆ ಸಾಗುತ್ತಿದ್ದ ಟೆಂಪೋದ ಎಡಭಾಗಕ್ಕೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರ ನರಸಿಂಹ ಡಿಕ್ಕಿ ಹೊಡೆದು ಬೈಕ್‌ ಸಮೇತ ರಸ್ತೆಗೆ ಬಿದ್ದಿದ್ದಾರೆ.
ಕೂಡಲೇ ಟೆಂಪೋ ಚಾಲಕ ಧರ್ಣಪ್ಪ ಎಂಬವರು ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸೊಂಟಕ್ಕೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top