ಕಾರ್ಕಳ : ಭಾರತೀಯ ರೆಡ್ ಕ್ರಾಸ್ ಸೊಸೈಟಿ ತಾಲೂಕು ಘಟಕದ ಸ್ಥಾಪಕ, ಸಭಾಪತಿಯಾಗಿ ಕಳೆದ ನಾಲ್ಕು ವರ್ಷಗಳಿಂದ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮುದಾಯದ ಸೇವೆಯನ್ನು ಮಾಡಿದ ಡಾ. ಕೆ.ಆರ್. ಜೋಶಿ ಅವರಿಗೆ ಕಾರ್ಕಳ ಘಟಕದ ಸದಸ್ಯರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಾ ವೈದ್ಯ ಮಧುಸೂದನ್ ನಾಯಕ್, ಕುಂದಾಪುರ ಘಟಕದ ಸಭಾಪತಿ ಜಯಕರ್ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್, ಅಜೆಕಾರ್ ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವೃಷಭ ರಾಜ ಕಡಂಬ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಿವಕುಮಾರ್ ಪ್ರಾರ್ಥಿಸಿ, ಶೇಖರ್ ಹೆಚ್ ಸ್ವಾಗತಿಸಿದರು. ಶ್ವೇತಾ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ತಾಲೂಕು ಘಟಕದ ಸ್ಥಾಪಕ ಡಾ. ಕೆ. ರಾಮಚಂದ್ರ ಜೋಶಿಯವರಿಗೆ ಸನ್ಮಾನ
Recent Comments
ಕಗ್ಗದ ಸಂದೇಶ
on