ದುರ್ಗಾ : ಎ. 10ರ ರಾತ್ರಿ ಸುರಿದ ಭಾರಿ ಮಳೆಗೆ ತೆಳ್ಳಾರಿನ ರಾಮಕೃಷ್ಣ ಆಚಾರ್ಯರ ಮನೆಯ ಮೇಲೆ ಮರ ಬಿದ್ದು ಸುಮಾರು 30 ಸಾವಿರ ರೂ. ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ. ಸ್ಥಳಕ್ಕೆ ಗ್ರಾ. ಪಂ. ಅಧ್ಯಕ್ಷ ಸತೀಶ್ ನಾಯಕ್, ಮಾಜಿ ಅಧ್ಯಕ್ಷೆ ದೇವಕಿ, ಸದಸ್ಯ ಸುಧಾಕರ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಸಿರೇ ಉಸಿರು ಪರಿಸರ ಸಂಘಟನೆಯ ಸದಸ್ಯರ ಜೊತೆಗೂಡಿ ಮರವನ್ನು ತೆರವುಗೊಳಿಸಲು ನೆರವಾದರು.
