ಕಾರ್ಕಳ : ವೀರಮಾರುತಿ ಶಾಖೆ ಬಜರಂಗದಳ ಮತ್ತು ಸಾರ್ವಜನಿಕ ಶನಿ ಪೂಜೆ ಸಮಿತಿ ವತಿಯಿಂದ 20 ನೇ ವರ್ಷದ ಶನಿ ಪೂಜೆ ಎ. 9ರಂದು ಜರುಗಿದ್ದು, ಧಾರ್ಮಿಕ ಸಭೆಯಲ್ಲಿ ಹಿರೇಹಡಗಲಿ ಹಾಲ ಮಠದ ಶ್ರೀ ಅಭಿನವ ಹಾಲ ಶ್ರೀ ಮಾತನಾಡಿ ಹಿಂದೂ ಸಮಾಜ ಈ ಜಗತ್ತಿಗೆ ಸಂಸ್ಕಾರವನ್ನು ನೀಡಿದಂತಹ ಧರ್ಮ. ನಮ್ಮ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಿಳಿಹೇಳಿ ನಮ್ಮ ದೇಶ ಜಗತ್ತಿಗೇ ಗುರುವಾಗಬೇಕು ಎಂದು ನುಡಿದರು.
ವಿಶೇಷವಾದ ಶನಿ ದೇವರ ಬಿಂಬದೊಂದಿಗೆ ಶಿಲಾಮಯವಾದ ಶನಿ ದೇವರ ಕ್ಷೇತ್ರದ ಲೋಕಾರ್ಪಣಾ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ನಡೆಯಿತು ಬಳಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಡ್ತಲ ವಿಶ್ವನಾಥ್ ಪೂಜಾರಿ ಬಜರಂಗದಳದ ಕಾರ್ಯಕರ್ತರ ಕಾರ್ಯ ಶ್ಲಾಘನೀಯ, ಸ್ವಾರ್ಥ ಬಿಟ್ಟು ದೇಶ, ಧರ್ಮದ ಕೆಲಸ ಮಾಡುವ ಕಾರ್ಯಕರ್ತರಿಗೆ ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡೋನ್ ವಹಿಸಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಮುಖಂಡ ಅರುಣ್ ನಿಟ್ಟೆ, ರಾಜ್ಯ ಕ್ವಾರಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಉದ್ಯಮಿ ಸುಭಾಸ್ ಕಾಮತ್, ವಾಸ್ತು ತಜ್ಞ ಪ್ರಮಲ್ ಪಿ.ಕೆ. ಉಪಸ್ಥಿತರಿದ್ದರು.
ಸುನಿಲ್ ಕೆ.ಆರ್. ಸ್ವಾಗತಿಸಿ, ಪ್ರವೀಣ್ ವಂದಿಸಿದರು. ಕು. ಸುರಕ್ಷಾ ಕಾರ್ಯಕ್ರಮವನ್ನು ನಿರ್ವಹಿಸಿದರು.
