ಕಾರ್ಕಳ : ನಗರದಲ್ಲಿ ಜೋರಾಗಿ ಸುರಿದ ಗುಡುಗು ಮಳೆಗೆ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.
ಕಸಬಾ ಗ್ರಾಮದ ಕಾಳಿಕಾಂಬಾ ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಇಲ್ಲಿಯ ನಿವಾಸಿ ವಿಮಲಾ ಪೂಜಾರ್ತಿ ರವರ ವಾಸದ ಮನೆಗೆ ಎ. 10 ರ ರಾತ್ರಿ 9:15 ರ ಸಮಯದಲ್ಲಿ ಸಿಡಿಲು ಬಡಿದು ಹಾನಿಯಾಗಿದೆ. ಇದರಿಂದ ಸುಮಾರು 20,000 ರೂ. ನಷ್ಟವಾಗಿರುವುದಾಗಿ ಮೂಲಗಳು ತಿಳಿಸಿವೆ.
