Thursday, May 26, 2022
spot_img
Homeಸ್ಥಳೀಯ ಸುದ್ದಿಅತ್ತೂರು : ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಅತ್ತೂರು : ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಕಾರ್ಕಳ: ನಾಯಿಯನ್ನು ಅಟ್ಟಿಸಿಕೊಂಡು ಹೋದ ಚಿರತೆ ಆಯತಪ್ಪಿ ಬಾವಿಗೆ ಬಿದ್ದ ಘಟನೆ ಎ. 10ರಂದು ನಡೆದಿದೆ.
ತಾಲೂಕಿನ ಅತ್ತೂರು ವಿನ್ಸೆಂಟ್ ನವಿನ್ ಕ್ಯಾಸ್ಟೋಲಿನೊ ಎನ್ನುವವರ ಮನೆಯ ಬಾವಿಗೆ ಬಿದ್ದ ಸುಮಾರು 6 ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಪರ್ಪಲೆಗಿರಿ ಹಾಗು ಅತ್ತೂರಿನ ಪರಿಸರದಲ್ಲಿ ಚಿರತೆಯ ಓಡಾಟ ಅತಿಯಾಗುತ್ತಿದ್ದು ಸ್ಥಳೀಯ ಮನೆಗಳಲ್ಲಿನ ನಾಯಿಗಳು ಕಾಣೆಯಾಗುತ್ತಿದ್ದವು.
ಕಾರ್ಕಳ ವಲಯ ಅರಣ್ಯಾಧಿಕಾರಿ ಜಿ.ಡಿ. ದಿನೇಶ್ ಅವರ ನೇತೃತ್ವದಲ್ಲಿ ಕಾರ್ಕಳ ವಲಯದ ಅರಣ್ಯ ಸಿಬ್ಬಂದಿ ಚಿರತೆಯನ್ನು ಮೇಲೆತ್ತಿ ಅದರ ಆರೋಗ್ಯ ತಪಾಸಣೆ ನಡೆಸಿದರು. ನಂತರ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗುವುದು ಎಂದರು. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ಚಂದ್ರ, ಹುಕ್ರಪ್ಪಗೌಡ, ರಾಘವೇಂದ್ರ ಶೆಟ್ಟಿ, ಚಂದ್ರಕಾಂತ್ ಪೋಳ್, ಅರಣ್ಯ ರಕ್ಷಕ ಎ.ಡಿ. ಪೊನ್ನಪ್ಪ, ಭಾಸ್ಕರ, ಶ್ರೀಧರ್ ನರೇಗಲ್, ಪ್ರಕಾಶ್, ಮಹಾಂತೇಶ್ ಎಚ್. ಗೋಡಿ, ಬಾಬು ಪೂಜಾರಿ, ಶಮೀಮ್, ಬಾಬು ಪೂಜಾರಿ ಯಾನೆ ಪ್ರಕಾಶ್, ಶ್ರೀಧರ ಪೂಜಾರಿ, ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಹಾಗೂ ಇತರರು ಸಹಕರಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!