ಹಿರ್ಗಾನ : ಚಲಿಸುತ್ತಿದ್ದ ಆಟೋರಿಕ್ಷಾಗೆ ಕಾರು ಡಿಕ್ಕಿಯಾಗಿ ಚಾಲಕ ಗಾಯಗೊಂಡ ಘಟನೆ ಎ. 9ರಂದು ಹಿರ್ಗಾನ ಗ್ರಾಮದ ಬಿ.ಇ.ಎಂ ಹಿರಿಯ ಪ್ರಾಥಮಿಕ ಶಾಲೆಯ ಬಳಿ ನಡೆದಿದೆ.
ಸತೀಶ್ ರಾವ್ ತಮ್ಮ ಆಟೋರಿಕ್ಷಾದಲ್ಲಿ ಕಾರ್ಕಳದ ಕಡೆಗೆ ಸಾಗುತ್ತಿದ್ದಾಗ ಅಜೆಕಾರಿನ ಕಡೆಗೆ ಚಲಿಸುತ್ತಿದ್ದ ಕಾರಿನ ಚಾಲಕ ವಿರುದ್ಧ ದಿಕ್ಕಿನಲ್ಲಿ ಬಂದು ರಿಕ್ಷಾ ಒಂದಕ್ಕೆ ಗುದ್ದಿದೆ. ಪರಿಣಾಮ, ರಿಕ್ಷಾ ಚಾಲಕ ಸತೀಶ್ ಆಟೋದಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರು ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸತೀಶ್ ಅವರ ಎರಡೂ ಕಾಲುಗಳ ಮೂಳೆ ಮುರಿತಕ್ಕೆ ಒಳಗಾಗಿದೆ. ಜೊತೆಗೆ ಎದೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾರು ಡಿಕ್ಕಿ ಹೊಡೆದು ರಿಕ್ಷಾ ಚಾಲಕನಿಗೆ ಗಾಯ
Recent Comments
ಕಗ್ಗದ ಸಂದೇಶ
on