Saturday, May 21, 2022
spot_img
Homeಕ್ರೈಂಉಡುಪಿ : ಎಟಿಎಂ ದರೋಡೆಗೆ ಯತ್ನಿಸಿದ 19 ರ ಯುವಕ ಅರೆಸ್ಟ್

ಉಡುಪಿ : ಎಟಿಎಂ ದರೋಡೆಗೆ ಯತ್ನಿಸಿದ 19 ರ ಯುವಕ ಅರೆಸ್ಟ್

ಉಡುಪಿ : ಅಂಬಾಗಿಲು – ಪರೆಂಪಳ್ಳಿ ಕ್ರಾಸ್‌ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ ಒಡೆಯಲು ಯತ್ನಿಸಿದ ವಿಜಯನಗರ ಮೂಲದ 19 ವರ್ಷದ ಯುವಕನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಹರಿಬೊಮ್ಮನಹಳ್ಳಿಯ ಬೆಣ್ಣೆಕಲ್ಲು ನಿವಾಸಿ ಹನುಮಂತ ಎಂದು ಗುರುತಿಸಲಾಗಿದೆ. ಮಾ. 7 ರ ಮಧ್ಯರಾತ್ರಿ ಎಟಿಎಂನಲ್ಲಿನ ಹಣ ದರೋಡೆ ಮಾಡುವ ಸಲುವಾಗಿ ಎಟಿಎಂ ಲಾಕರ್‌ ಬಾಗಿಲನ್ನು ಮುರಿಯಲಾಗಿತ್ತು. ಇದನ್ನು ಗಮನಿಸಿದ ಆ ಎಟಿಎಂ ಶಾಖೆಗೆ ಹಣವನ್ನು ತುಂಬಿಸುವ ಕೆಲಸ ಮಾಡುತ್ತಿದ್ದ ಏಜೆನ್ಸಿಯ ಜನರಲ್‌ ಮ್ಯಾನೇಜರ್‌ ದೂರು ನೀಡಿದ್ದರು.
ಈ ದೂರಿನ ಅನ್ವಯ ಪೊಲೀಸ್‌ ಅಧೀಕ್ಷಕ ವಿಷ್ಣುವರ್ಧನ್‌ ಮಾರ್ಗದರ್ಶನದಲ್ಲಿ ಪೊಲೀಸ್‌ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!