ಮಂಗಳೂರು : ಡಿವೈಡರ್‌ ಹಾರಿದ ಕಾರು ಸ್ಕೂಟರ್ಗೆ ಡಿಕ್ಕಿ – ಮಹಿಳೆ ಗಂಭೀರ

ಮಂಗಳೂರು : ಬಿಎಂಡಬ್ಲ್ಯೂ ಕಾರೊಂದು ಡಿವೈಡರ್‌ ಹಾರಿ ಎರಡು ವಾಹನಗಳಿಗೆ ಡಿಕ್ಕಿಯಾಗಿ ಮಹಿಳೆ ಗಂಭೀರ ಗಾಯಗೊಂಡ ಘಟನೆ ಮಂಗಳೂರಿನ ಬಲ್ಲಾಳ್‌ ಭಾಗ್‌ನಲ್ಲಿ ಎ. 9ರಂದು ನಡೆದಿದೆ. ಬಿಎಮ್‌ಡಬ್ಲ್ಯೂ ಕಾರು ಚಾಲಕ ಪಾನಮತ್ತನಾಗಿದ್ದು ಸ್ಕೂಟರ್‌ ಗೆ ಡಿಕ್ಕಿಯಾಗಿ ಮತ್ತೆರಡುಡ ಕಾರಿಗೆ ಗುದ್ದಿದ್ದಾನೆ. ಪರಿಣಾಮ ಸ್ಕೂಟರ್‌ ಸವಾರೆ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಅಪಘಾತಕ್ಕಿಡಾದ ಮತ್ತೆರಡೂ ಕಾರುಗಳೂ ಕೂಡಾ ಜಖಂಗೊಂಡಿದೆ. ಸ್ಥಳದಲ್ಲಿ ಮತ್ತೊಬ್ಬ ಮಹಿಳೆ ಡಿವೈಡರ್‌ ಮೇಲೆ ರಸ್ತೆ ದಾಟಲು ನಿಂತುಕೊಂಡಿದ್ದು ಕಾರು ಗುದ್ದಿದ ರಭಸಕ್ಕೆ ಪಾದಾಚಾರಿ ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ಗಾಯಾಳು ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಸಧ್ಯ ಬಿಎಮ್ಡಬ್ಲ್ಯೂ ಕಾರು ಚಾಲಕನನ್ನು ಡ್ರಂಕ್‌ ಆಂಡ್‌ ಡ್ರೈವ್‌ ಆರೋಪದಡಿ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.

error: Content is protected !!
Scroll to Top