Thursday, May 26, 2022
spot_img
Homeರಾಜ್ಯಮನೆಯಲ್ಲಿ ಎಸಿ ಸ್ಫೋಟ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಜೀವ ದಹನ

ಮನೆಯಲ್ಲಿ ಎಸಿ ಸ್ಫೋಟ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಜೀವ ದಹನ

ವಿಜಯನಗರ: ಎಸಿ ಸ್ಫೋಟಗೊಂಡು ಇಬ್ಬರು ಮಕ್ಕಳ ಸಹಿತ ದಂಪತಿ ಸಜೀವ ದಹನವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಕಳೆದ ತಡರಾತ್ರಿ ಸಂಭವಿಸಿದೆ.

ಮೃತ ದಂಪತಿಯನ್ನು 42 ವರ್ಷದ ವೆಂಕಟ್ ಪ್ರಶಾಂತ್, 38 ವರ್ಷದ ಡಿ ಚಂದ್ರಕಲಾ, ಮಕ್ಕಳಾದ 16 ವರ್ಷದ ಎಚ್ ಎ ಅರ್ದ್ವಿಕ್ ಮತ್ತು 8 ವರ್ಷದ ಬಾಲಕಿ ಪ್ರೇರಣ ಎಂದು ಗುರುತಿಸಲಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯಲ್ಲಿ ಸೋರಿಕೆಯೊಗಿ ಈ ಘೋರ ಸ್ಫೋಟ ಸಂಭವಿಸಿದೆ. ತಡರಾತ್ರಿ ಹೊತ್ತು ನಿದ್ದೆ ಮಾಡುತ್ತಿದ್ದ ವೇಳೆ ಎಸಿ ಸ್ಫೋಟಗೊಂಡು ಬೆಂಕಿ ಧಗಧಗನೆ ಹೊತ್ತಿ ಉರಿದು ಇಡೀ ಮನೆ ಆವರಿಸಿದ್ದರಿಂದ ದಂಪತಿ ಮತ್ತು ಮಕ್ಕಳು ಹೊರಬರಲಾಗದೆ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮರಿಯಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!