Tuesday, May 17, 2022
spot_img
Homeರಾಜ್ಯಕೊರೋನಾದಿಂದ ಮೃತಪಟ್ಟವರ ವಾರಸುದಾರರಿಗೆ ಪರಿಹಾರ‌ ನಿಧಿಗಾಗಿ ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿ

ಕೊರೋನಾದಿಂದ ಮೃತಪಟ್ಟವರ ವಾರಸುದಾರರಿಗೆ ಪರಿಹಾರ‌ ನಿಧಿಗಾಗಿ ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿ

ಬೆಂಗಳೂರು: ಕೊರೋನಾ ಸೋಂಕು ತಗುಲಿ ಮೃತರಾದ ವ್ಯಕ್ತಿಗಳ ಸಲುವಾಗಿ ನೀಡುವ ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಆದೇಶದಲ್ಲಿ ಕೇಂದ್ರ ಸರ್ಕಾರ‌ದ ಮಾರ್ಗಸೂಚಿ‌ಗನ್ವಯ ತಲಾ 50 ಸಾವಿರ ರೂ. ಪರಿಹಾರ ಧನವನ್ನು ಒದಗಿಸಲು ಸೂಚಿಸಲಾಗಿದೆ. ಸೋಂಕು ತಗುಲಿ ಮೃತಪಟ್ಟವರ ಕಾನೂನು‌ಬದ್ದ ವಾರಸುದಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಈ ನಿರ್ದೇಶನ ನೀಡಲಾಗಿದೆ.
ಮಾ. 20, 2022 ರಿಂದ ಆರಂಭವಾದಂತೆ ಮುಂದಿನ 60 ದಿನಗಳ ಕಾಲಮಿತಿ ನಿಗದಿ ಮಾಡಲಾಗಿದೆ. ಮಾ. 20 ರ ನಂತರ ಕೊರೋನಾ ತಗುಲಿ ಮೃತಪಟ್ಟವರ ಪರಿಹಾರ ಮೊತ್ತಕ್ಕೆ ಅರ್ಜಿ ಸಲ್ಲಿಸಲು 90 ದಿನಗಳ ವರೆಗೆ ಅವಧಿಯನ್ನು ನೀಡಲಾಗಿದೆ. ಸೂಕ್ತ ದಾಖಲೆಗಳನ್ನು ನೀಡಿ ಈ ಪರಿಹಾರ ಪಡೆಯುವಂತೆ ಸೂಚಿಸಲಾಗಿದೆ. ಮೃತ ವ್ಯಕ್ತಿ‌ಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!