ನವದೆಹಲಿ : ದೇಶದ ಜನತೆ ಪರಸ್ಪರ ಸಂವಹನ ನಡೆಸುವಾಗ ಹಿಂದಿಯಲ್ಲಿ ಮಾತಾಡಬೇಕೆ ಹೊರತು ಇಂಗ್ಲೀಷ್ ನಲ್ಲಿ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಧಿಕೃತ ಭಾಷಾ ಸಮಿತಿಯ ಅಧ್ಯಕ್ಷರಾಗಿರುವ ಶಾ, ಸಮಿತಿಯ 37ನೇ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರವನ್ನು ನಡೆಸುವ ಮಾಧ್ಯಮವೇ ಅಧಿಕೃತ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು, ಹಿಂದಿಯ ಮಹತ್ವ ಹೆಚ್ಚಾಗಲಿದೆ. ಅಧಿಕೃತ ಭಾಷೆಯನ್ನು ದೇಶದ ಒಗ್ಗಟ್ಟಿನ ಪ್ರಮುಖ ಭಾಗವನ್ನಾಗಿಸುವ ಸಮಯ ಬಂದಿದೆ. ಹಿಂದಿಯನ್ನು ಇಂಗ್ಲೀಷ್ಗೆ ಪರ್ಯಾಯವನ್ನಾಗಿ ಬೆಳೆಸಬೇಕು. ಆದರೆ ಸ್ಥಳೀಯ ಭಾಷೆಗಳಿಗೆ ಪರ್ಯಾಯವಾಗಿ ಅಲ್ಲ. ಬೇರೆ ಸ್ಥಳೀಯ ಭಾಷೆಗಳಿಂದ ಶಬ್ದಗಳನ್ನು ಸ್ವೀಕರಿಸುವ ಮೂಲಕ ಹಿಂದಿಯನ್ನೂ ಬೆಳೆಸಬೇಕು ಎಂದು ಅವರು ಹೇಳಿದ್ದಾರೆ.
ಇಂಗ್ಲಿಷ್ಗೆ ಪರ್ಯಾಯವಾಗಿ ಹಿಂದಿ ಭಾಷೆ ಬೆಳೆಯಬೇಕು : ಅಮಿತ್ ಶಾ
Recent Comments
ಕಗ್ಗದ ಸಂದೇಶ
on