Thursday, May 26, 2022
spot_img
Homeದೇಶಭಾರತ ಶಾಂತಿಯ ಪರ: ಎಸ್. ಜೈಶಂಕರ್

ಭಾರತ ಶಾಂತಿಯ ಪರ: ಎಸ್. ಜೈಶಂಕರ್

ನವದೆಹಲಿ: ರಷ್ಯಾ – ಯುಕ್ರೇನ್ ಕದನದಲ್ಲಿ ಭಾರತ ಶಾಂತಿಯ ಪರ ನಿಂತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಯುಕ್ರೇನ್ ಬಿಕ್ಕಟ್ಟಿನ ಬಗ್ಗೆ ಲೋಕಸಭೆ‌ಯಲ್ಲಿ ನಡೆದ ಚರ್ಚೆಗೆ ಸಚಿವರು ಉತ್ತರಿಸಿದ್ದು, ಯುಕ್ರೇನ್ – ರಷ್ಯಾ ನಡುವಿನ ಕಾಳಗದಲ್ಲಿ ಭಾರತ ಒಂದು ಪಕ್ಷದ ಪರ ನಿಂತಿದೆ ಎನ್ನುವವರಿಗೆ, ಭಾರತ ಶಾಂತಿಯ ಪರ ನಿಂತಿದೆ ಎಂದು ಉತ್ತರ ನೀಡಿದ್ದಾರೆ. ಆ ದೇಶದಲ್ಲಿ ಹಿಂಸಾಚಾರ ಕೊನೆಗೊಂಡು, ಶಾಂತಿ ಸ್ಥಾಪನೆ ಆಗಬೇಕು. ಈ ನಿಲುವನ್ನು ಭಾರತ ಹೊಂದಿದೆ ಎಂದು ಹೇಳಿದ್ದಾರೆ.
ಹಾಗೆಯೇ ಯುಕ್ರೇನ್‌ನಲ್ಲಿದ್ದ ಭಾರತೀಯ ಪ್ರಜೆಗಳ‌ನ್ನು ಅಲ್ಲಿಂದ ಇಲ್ಲಿಗೆ ಕರೆ ತರುವ ಮೂಲಕ ಇತರ ರಾಷ್ಟ್ರಗಳಿಗೂ ಭಾರತ ಮಾದರಿಯಾಯಿತು. ‘ಆಪರೇಷನ್ ಗಂಗಾ’ ಅತ್ಯಂತ ಸವಾಲಿನ ಕೆಲಸವಾಗಿದ್ದು, ಯುಕ್ರೇನ್‌ನ ನೆರೆ ರಾಷ್ಟ್ರಗಳ ನೆರವಿನಿಂದಲೇ ಕಾರ್ಯಾಚರಣೆ ಯಶಸ್ಸು ಪಡೆಯಿತು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!