ನವದೆಹಲಿ: ಆಚರಣೆಗಳನ್ನು ಹೇಗೆ ಆಚರಿಸಬೇಕು ಎನ್ನುವುದು ಧಾರ್ಮಿಕ, ಸಾಮಾಜಿಕ ವಿಚಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಹಲಾಲ್ ಮತ್ತು ಹಿಜಾಬ್ ವಿಚಾರಗಳಿಗೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಎಲ್ಲರಿಗೂ ಒಂದೇ. ಅದಕ್ಕೆ ತಲೆ ತಗ್ಗಿಸಿ ನಡೆಯುವುದು ಎಲ್ಲರ ಕರ್ತವ್ಯ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು, ಕಾನೂನು ಪಾಲನೆಗೆ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಶಾಂತಿ ಕಾಪಾಡುವಲ್ಲಿ ಕೈಕಟ್ಟಿ ಕುಳಿತಿದೆ ಎಂಬ ಎಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾವಾಗ ಕೆಲಸ ಮಾಡಬೇಕೋ, ಆಗ ಮಾಡುತ್ತಿದ್ದೇವೆ. ಅವರು ಏನಾದರೂ ಅಂದುಕೊಳ್ಳಲಿ. ಸತ್ಯ ಏನೆಂದು ಜನರು ತೀರ್ಮಾನ ಮಾಡುತ್ತಾರೆ. ಹಿಜಾಬ್ ವಿಷಯಕ್ಕೆ ಕೋರ್ಟ್ಗೆ ಏನು ಹೇಳಬೇಕಿತ್ತೋ ಅದನ್ನು ತಿಳಿಸಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇವೆ. ಹೇಳಿಕೆ ಕೊಟ್ಟರಷ್ಟೇ ಆಡಳಿತ ಅಲ್ಲ. ಆಡಳಿತ ನಡೆಸಲು ಹಲವಾರು ರೀತಿ ನೀತಿಗಳಿವೆ ಎಂದು ತಿರುಗೇಟು ನೀಡಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ: ಸಿಎಂ ಬೊಮ್ಮಾಯಿ
Recent Comments
ಕಗ್ಗದ ಸಂದೇಶ
on