Thursday, May 26, 2022
spot_img
Homeಸ್ಥಳೀಯ ಸುದ್ದಿಶಿರ್ವ ಗ್ರಾ.ಪಂ. ಪಿಡಿಒನನ್ನು ಅಮಾನತುಗೊಳಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು : ಬಿಪಿನ್‌ಚಂದ್ರ ಪಾಲ್

ಶಿರ್ವ ಗ್ರಾ.ಪಂ. ಪಿಡಿಒನನ್ನು ಅಮಾನತುಗೊಳಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು : ಬಿಪಿನ್‌ಚಂದ್ರ ಪಾಲ್

ಶಿರ್ವ: ಬಡ ಮಹಿಳೆಯೊಬ್ಬಳು ಅಕ್ರಮ ಸಕ್ರಮದಡಿ ನಿರ್ಮಿಸಿದ್ದ ಮನೆಯನ್ನು ಕಾನೂನಿನ ನೆಪವೊಡ್ಡಿ, ಯಾವುದೇ ಪೂರ್ವಸೂಚನೆ ನೀಡದೆ ಕೆಡವಿದ್ದನ್ನು ಪ್ರಶ್ನಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಮೇಲೆ ಹಲ್ಲೆಗೆ ಯತ್ನಿಸಿ ಸಾರ್ವಜನಿಕರೆದುರು ಗೂಂಡಾಗಿರಿ ಪ್ರದರ್ಶಿಸಿದ ಶಿರ್ವ ಗ್ರಾ.ಪಂ. ಪಿಡಿಒನನ್ನು ಕೂಡಲೇ ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಮಾಜಿ ಸಚಿವರೊಬ್ಬರಿಗೆ ಸರಕಾರದ ಪ್ರೋಟೋಕಾಲ್ ನಿಯಮಾವಳಿಯಡಿಯಲ್ಲಿ ಅವರದ್ದೇ ಆದ ಗೌರವಾಧರಗಳಿವೆ. ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗಳಿವೆ. ಆದರೆ ಬಿಜೆಪಿ ತನ್ನ ಸರ್ವಾಧಿಕಾರದ ಜನವಿರೋಧಿ ನೀತಿಯ ಆಡಳಿತವನ್ನು ಪ್ರಶ್ನಿಸುವವರನ್ನು ಧಮನಿಸಲು ಅಧಿಕಾರಶಾಹೀ (ಬ್ಯೂರೋಕ್ರೇಟ್ಸ್) ವರ್ಗವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಈ ಘಟನೆ ಇದಕ್ಕೊಂದು ಜ್ವಲಂತ ಸಾಕ್ಷಿಯಾಗಿದ್ದು, ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ. ಇಂತಹ ಪ್ರಜಾತಂತ್ರ ವಿರೋಧಿ ಅಧಿಕಾರಿಗಳು ಮತ್ತು ರಾಜಕೀಯದ ವಿರುದ್ಧ ಕಾಂಗ್ರೆಸ್ ಸಾಂವಿಧಾನಿಕ ರೀತಿಯ ಹೋರಾಟ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!