Thursday, May 19, 2022
spot_img
Homeದೇಶಸಂಪೂರ್ಣ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟ ಉತ್ತರಾಖಂಡ್‌ನ ಅಜ್ಜಿ

ಸಂಪೂರ್ಣ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟ ಉತ್ತರಾಖಂಡ್‌ನ ಅಜ್ಜಿ

ಉತ್ತರಾಖಂಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಉತ್ತರಾಖಂಡ್ ನ ವೃದ್ಧೆಯೊಬ್ಬರು ತಮ್ಮ ಸಂಪೂರ್ಣ ಆಸ್ತಿಯನ್ನು ಬರೆದುಕೊಟ್ಟಿದ್ದಾರೆ. 

ರಾಹುಲ್ ಗಾಂಧಿಯವರನ್ನು ತಮ್ಮ ಆಸ್ತಿಯ ವಾರಸುದಾರರನ್ನಾಗಿ ಮಾಡುವಂತೆ ಡೆಹ್ರಾಡೂನ್‌ನ ನೆಹರು ಕಾಲೋನಿಯ ದಲನ್‌ವಾಲಾ ನಿವಾಸಿ ವೃದ್ಧೆ ಪುಷ್ಪಾ ಮುಂಜಿಯಾಲ್ ಎಂಬುವರು ಜಿಲ್ಲಾ ನ್ಯಾಯಾಲಯಕ್ಕೆ ವಿಲ್ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ಪ್ರಭಾವಿತಳಾಗಿದ್ದೇನೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಗಾಂಧಿ ಕುಟುಂಬ ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದೆ. ಅದಕ್ಕಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಪುಪ್ಪಾ ಹೇಳಿದ್ದಾರೆ.

ತಮ್ಮ ಆಸ್ತಿಯ ವಿವರವನ್ನು ನ್ಯಾಯಾಲಯಕ್ಕೆ ನೀಡಿರುವ ಅವರು, ಸಂಪೂರ್ಣ ಆಸ್ತಿಯ ಮಾಲೀಕತ್ವವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದಾರೆ. ತಾವು ಬರೆಸಿದ ವಿಲ್ ನ ದಾಖಲೆಗಳನ್ನು ಕಾಂಗ್ರೆಸ್ ಪಕ್ಷದ ನಾಯಕರಿಗೆ ಹಸ್ತಾಂತರಿಸಿರುವ ಅಜ್ಜಿ, ರಾಹುಲ್ ಗಾಂಧಿಯವರು ದೇಶದ ಬಗ್ಗೆ ಹೊಂದಿರುವ ದೃಷ್ಟಿಕೋನದಿಂದ ಬಹಳವಾಗಿ ಪ್ರಭಾವಿತನಾಗಿದ್ದೇನೆ. ದೇಶಕ್ಕೆ ರಾಹುಲ್ ಗಾಂಧಿಯಂತಹ ನಾಯಕರ ಅಗತ್ಯವಿದೆ. ದೇಶಕ್ಕಾಗಿ ಅವರ ಮೌಲ್ಯಗಳು ಮತ್ತು ಆಲೋಚನೆಗಳಿಂದ ಪ್ರಭಾವಿತಳಾಗಿದ್ದೇನೆ ಎಂದಿದ್ದಾರೆ.. 78 ವರ್ಷದ ಈ ಅಜ್ಜಿಯ ಬಳಿ 50 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಮತ್ತು ಸುಮಾರು 10 ಪವನ ಬಂಗಾರವಿದೆ, ಅದನ್ನು ರಾಹುಲ್ ಗಾಂಧಿಯವರ ಹೆಸರಿಗೆ ವರ್ಗಾಯಿಸಿದ್ದಾರೆ. 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!