Thursday, May 26, 2022
spot_img
Homeದೇಶ17 ಕೋಟಿಗೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿಗೆ ಆಯುಷ್ಮಾನ್ ಯೋಜನೆಯಿಂದ ಪ್ರಯೋಜನ

17 ಕೋಟಿಗೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿಗೆ ಆಯುಷ್ಮಾನ್ ಯೋಜನೆಯಿಂದ ಪ್ರಯೋಜನ

ನವದೆಹಲಿ: ದೇಶದ ಅಸಂಘಟಿತ ವಲಯದ, ಇ – ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ 17 ಕೋಟಿಗೂ ಹೆಚ್ಚು ಕಾರ್ಮಿಕರು ಆಯುಷ್ಮಾನ್ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇವರೆಲ್ಲರಿಗೂ ಆಯುಷ್ಮಾನ್ ಕಾರ್ಡ್ ಒದಗಿಸಲಾಗಿದೆ. ದೇಶದ ಅಸಂಘಟಿತ ವಲಯದ ಕಾರ್ಮಿಕರಲ್ಲಿ 27 ಕೋಟಿಗೂ ಅಧಿಕ ಜನರು ಇ – ಶ್ರಮ್ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ‌ದ ವಿವಿಧ ಸೌಲಭ್ಯ‌ಗಳು, ಯೋಜನೆಗಳ ಪ್ರಯೋಜನ ದೊರೆಯುತ್ತಿದೆ ಎಂದು ಸರ್ಕಾರ ಹೇಳಿದೆ.

ಕಳೆದ ಎರಡು ವರ್ಷಗಳ‌ಲ್ಲಿ ಇ – ಶ್ರಮ್ ಯೋಜನೆಯ ಡಾಟಾಬೇಸ್‌ಗಾಗಿ 300 ಕೋಟಿ ರೂ. ಗಳಿಗಿಂತಲೂ ಅಧಿಕ ಹಣ ಉಪಯೋಗಿಸಲಾಗಿದೆ. ಇ – ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಕಾರ್ಮಿಕ‌ರಿಗೆ ವರ್ಷ‌ಕ್ಕೆ 2 ಲಕ್ಷ ರೂ. ಗಳ ಅಪಘಾತ ಮರಣ, ಅಂಗವೈಕಲ್ಯ ವಿಮಾ ರಕ್ಷಣಾ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!