Thursday, May 26, 2022
spot_img
Homeರಾಜ್ಯದೇಗುಲ ದರ್ಶನ‌ಕ್ಕೆ ಡಿಜಿಟಲ್ ವೇದಿಕೆ: 'ಟೆಂಪಲ್‌ 360' ಗೆ ಚಾಲನೆ

ದೇಗುಲ ದರ್ಶನ‌ಕ್ಕೆ ಡಿಜಿಟಲ್ ವೇದಿಕೆ: ‘ಟೆಂಪಲ್‌ 360’ ಗೆ ಚಾಲನೆ

ನವದೆಹಲಿ: ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ‌ದ ಅಡಿಯಲ್ಲಿ ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ‘ಟೆಂಪಲ್ 360’ ವೈಬ್‌ಸೈಟ್‌ಗೆ ಚಾಲನೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಭಕ್ತರಿಗೆ ದೇವಾಲಯಗಳಿಗೆ ಭೇಟಿ ನೀಡುವುದು ಅಸಾಧ್ಯ‌ವಾಗಿತ್ತು. ಈ ಹಿನ್ನೆಲೆಯಲ್ಲಿ ಡಿಜಿಟಲ್ ವೇದಿಕೆ ‘ ಟೆಂಪಲ್ 360’ ಯನ್ನು ಆರಂಭಿಸಲಾಗಿದೆ. ಈ ಡಿಜಿಟಲ್ ವೇದಿಕೆಯ ಮೂಲಕ 12 ಜ್ಯೋತಿರ್ಲಿಂಗ ಮತ್ತು ಚಾರ್ ಧಾಮ್‌ಗಳ ದರ್ಶನ ಮಾಡಬಹುದು ಎಂದು ಅವರು ತಿಳಿಸಿದರು.

ಇ – ದರ್ಶನ, ಇ – ಆರತಿ, ಇ – ಪ್ರಸಾದಕ್ಕೆ ಈ ವೇದಿಕೆಯ‌ಲ್ಲಿ ಅವಕಾಶ ನೀಡಲಾಗಿದೆ. ಇದು ಭಕ್ತರಿಗೆ ಅನುಕೂಲ ಒದಗಿಸುತ್ತದೆ ಎಂದು ಲೇಖಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ ಯಾವುದೇ ಪ್ರದೇಶದಿಂದ, ಯಾವುದೇ ಸಮಯದಲ್ಲಾದರೂ ಈ ವೇದಿಕೆ ಮೂಲಕ ದೇವರ ದರ್ಶನ, ದೇಗುಲ ದರ್ಶನ ಸಾಧ್ಯ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!