ಕಾರ್ಕಳ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಮತ್ತು ಕನ್ನಡ ಸಂಘದ ಸಹಯೋಗದಲ್ಲಿ ಯುಗಾದಿ ಸಂಭ್ರಮದ ಜೊತೆಗೆ ಅರಿವು ತಿಳಿವು 4ನೇಯ ಉಪನ್ಯಾಸ ಕಾರ್ಯಕ್ರಮ ಹೋಟೆಲ್ ಪ್ರಕಾಶ ಸಂಭ್ರಮ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಡಾ. ರಾಜಶೇಖರ ಹಳೆಮನೆ ಅವರು ‘ಅನುಭಾವ ಪರಂಪರೆ ಮತ್ತು ತತ್ತ್ವಪದಕಾರರು’ ಎಂಬ ವಿಷಯದಲ್ಲಿ ಉಪನ್ಯಾಸವನ್ನು ನೀಡಿದರು. ತತ್ವಪದಗಳು ಅನುಭಾವದ ನುಡಿಗಳು ಇವು ಜೀವನದಲ್ಲಿ ಭೌತಿಕತೆಯನ್ನು ಮೀರಿದ ಅಧ್ಯಾತ್ಮಿಕತೆಯ ಚಿಂತನೆಗಳನ್ನು ಮೂಡಿಸುವಂತಹದು. ನಾಡಿನ ಶ್ರೇಷ್ಠ ತತ್ತ್ವಪದಕಾರರು ಭೌತಿಕವಾದ ದೇಹವನ್ನು ರೂಪಕವಾಗಿಸಿ ಭಗವಂತನ ಸೇವೆಯ ಮಾಧ್ಯಮವನ್ನಾಗಿಸಿಕೊಂಡರು. ಈ ತತ್ತ್ವಪದಗಳು ಸರಳವಾದ ಭಾಷೆಯಿಂದ ಕೂಡಿದೆ. ಅದನ್ನು ನಿರೂಪಿಸುವಲ್ಲಿ ಅರ್ಥಪೂರ್ಣ ಸಂಗತಿಗಳಿವೆ ಗಹನವಾದ ವಿಚಾರಗಳನ್ನು ಶ್ರೀಸಾಮಾನ್ಯನಿಗೂ ಅರಿವಿನ ತಿಳಿವು ಮೂಡಿಸುವಂತಹದ್ದಾಗಿದೆ. ಸಂತ ಶಿಶುನಾಳ ಶರೀಫರ, ಕಡಕೋಳ ಮಂಜಪ್ಪನವರ, ಕೈವಾರ ತಾತಯ್ಯ ದಾರ್ಶನಿಕರ, ಚಿಂತಕರ, ಅನುಭಾವಿಗಳ ಅನುಭವದ ನುಡಿಗಳು ಮಾನವ ಬದುಕಿಗೆ ದಾರಿದೀಪಗಳಾಗಿವೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಉದ್ಯಮಿ ಎಸ್. ನಿತ್ಯಾನಂದ ಪೈ ಅವರು ವಹಿಸಿದ್ದರು.
ವೇದಿಕೆಯಲ್ಲಿ ಕಾರ್ಕಳ ಘಟಕದ ಅಧ್ಯಕ್ಷೆ ಮಿತ್ರಪ್ರಭ ಹೆಗ್ಡೆ, ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರಾವಿ ಉಪಸ್ಥಿತರಿದ್ದರು.
ವೈಷ್ಣವಿ, ಪ್ರಜ್ಞಾ, ಸಿಂಚನಾ ಪ್ರಾರ್ಥಿಸಿದರು. ವೀಣಾ ರಾಜೇಶ್ ಸ್ವಾಗತಿಸಿದರು. ಗಂಗಾಧರ ಪಣಿಯೂರು ನಿರೂಪಿಸಿದರು. ಪ್ರಕಾಶ್ ಕಾರ್ಕಳ ವಂದಿಸಿದರು.
‘ತತ್ತ್ವಪದಗಳಲ್ಲಿ ಅನುಭಾವ ಪರಂಪರೆ ಅರಿವು ತಿಳಿವು’: ಉಪನ್ಯಾಸ
Recent Comments
ಕಗ್ಗದ ಸಂದೇಶ
on