Thursday, May 26, 2022
spot_img
Homeಸುದ್ದಿಅನಂತಶಯನ ದೇವರ ದರುಶನ ಪಡೆದ ಸಚಿವೆ ಶೋಭಾ ಕರಂದ್ಲಾಜೆ

ಅನಂತಶಯನ ದೇವರ ದರುಶನ ಪಡೆದ ಸಚಿವೆ ಶೋಭಾ ಕರಂದ್ಲಾಜೆ

ಕಾರ್ಕಳ : ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಎ. 3ರಂದು ಕಾರ್ಕಳ ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದರು.
ನಿಟ್ಟೆ ಗ್ರಾಮದ ಪದವು ಎಂಆರ್‌ಎಫ್‌ ಘಟಕ ಉದ್ಘಾಟನೆಗಾಗಿ ಕಾರ್ಕಳ ಆಗಮಿಸಿದ್ದ ಸಚಿವರು ಕಾರ್ಯಕ್ರಮಕ್ಕೂ ಮುಂಚೆ ಕಾರ್ಕಳ ಪ್ರವಾಸಿ ಮಂದಿರ (ಐಬಿ) ಬಂದಿದ್ದು, ಅಲ್ಲಿಂದ ಕಾಲ್ನಡಿಗೆಯಲ್ಲೇ ಬೆಂಗಾವಲು ರಹಿತರಾಗಿ ಅನಂತಶಯನ ದೇವಸ್ಥಾನಕ್ಕೆ ಆಗಮಿಸಿ ದೇವರ ದರುಶನ ಪಡೆದರು. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಸದಸ್ಯೆ ಶಶಿಕಲಾ, ದುರ್ಗಾ ಗ್ರಾ.ಪಂ. ಅ‍ಧ್ಯಕ್ಷ ಸತೀಶ್‌, ಎಪಿಎಂಸಿ ನಿರ್ದೇಶಕ ಪ್ರಕಾಶ್‌ ಬಲಿಪರಹಾಡಿ ಸಚಿವರೊಂದಿಗಿದ್ದರು.

ಸಚಿವರ ಸರಳತೆ
ದೇವರ ದರುಶನ ಪಡೆದ ಬಳಿಕವೂ ಕೇಂದ್ರ ಸಚಿವರು ಕಾಲ್ನಡಿಗೆಯಲ್ಲೇ ಪ್ರವಾಸಿ ಮಂದಿರ ಸಾಗಿದರು. ಸಚಿವರ ಸಹಜ ಸರಳತೆ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಈ ವೇಳೆ ಹಲವರು ಸಚಿವರ ಬಳಿ ಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಪೆರ್ವಾಜೆ ರಕ್ತೇಶ್ವರಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಹತ್ತಿರದ ಪೆರ್ವಾಜೆ ಶಾಲೆಯ ಮಕ್ಕಳೊಂದಿಗೆ ಕೆಲ ಕಾಲ ಬೆರೆತು ಪರೀಕ್ಷೆ ಸಿದ್ಧತೆ ಕುರಿತು ವಿಚಾರಿಸಿದರು. ಈ ವೇಳೆ ಶಾಲಾ ಮುಖ್ಯಶಿಕ್ಷಕಿ ಹರ್ಷಿಣಿ ಉಪಸ್ಥಿತರಿದ್ದರು.

ಪೆರ್ವಾಜೆ ಶಾಲಾ ಮಕ್ಕಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಸಚಿವೆ ಶೋಭಾ ಕರಂದ್ಲಾಜೆ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!