ಬೆಂಗಳೂರು : ನಗರದ ಕೋರಮಂಗಲದ ಕೆಎಸ್ಆರ್ಪಿ ಮೈದಾನದಲ್ಲಿ ಏಪ್ರಿಲ್ 2 ರಂದು ನಡೆದ ಪೊಲೀಸ್ ಧ್ವಜ ದಿನಾಚರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸಿಎಂ ಜೊತೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಬಳಿಕ ಮಾತನಾಡಿದ ಸಿಎಂ ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಶ್ರಮ ಅನನ್ಯ ಪೊಲೀಸ್ ಇಲಾಖೆ ಬೇರೆ ಇಲಾಖೆಗಳಂತಲ್ಲ. ಪೊಲೀಸ್ ಇಲಾಖೆಗೂ ಇತರ ಇಲಾಖೆಗಳಿಗೂ ಬಹಳ ವ್ಯತ್ಯಾಸಗಳಿವೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳ ದಕ್ಷತೆ ಹಾಗೂ ನಿಷ್ಠೆ ದೇಶ ಮತ್ತು ರಾಜ್ಯದ ಭದ್ರತೆಗೆ ಬಹಳ ಮುಖ್ಯವಾಗಿದೆ ಎಂದರು. ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರು ಮುಖ್ಯಮಂತ್ರಿ ಪದಕ ಪುರಸ್ಕೃತ 135 ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ರಾಘವೇಂದ್ರ ಆರ್. ನಾಯಕ್ ಡಿವೈಎಸ್ಪಿ ಡಿ.ಎ.ಎ.ಆರ್. ಉಡುಪಿ, ಕೆ. ಆರ್. ನಂದೀಶ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬೆಂಗಳೂರು, ಪಿ. ಸಿದ್ದರಾಮಣ್ಣ, ಬಿ.ಎಸ್. ಚಂದ್ರಶೇಖರ್, ಜಿ. ಕೃಷ್ಣಕುಮಾರ್, ಹನುಮೇಶ್ ಎಚ್. ಸಿ.ಸಿ.ಬಿ. ಡಿ.ವೈ.ಎಸ್ಪಿ ಬಾಗಲಕೋಟೆ, ಆರ್.ಎನ್. ನಿಖಿಲ್ ಕುಮಾರ್ ಎ.ಸಿ.ಬಿ ಸಿ.ಎ.ಆರ್ ದಕ್ಷಿಣ, ಆರ್. ರಮೇಶ್ ಸಹಾಯಕ ಕಮಾಂಡೆಂಟ್ 3ನೇ ಪಡೆ, ವೀರೇಂದ್ರ ಕುಮಾರ್ ಡಿ.ವೈ.ಎಸ್ಪಿ ಸಿ.ಐ.ಡಿ, ಚಂದ್ರಕಾಂತ್ ನಂದಾರೆಡ್ಡಿ, ಕೆ.ಎಸ್.ಆರ್ಪಿ, ಕೇದಾರ್ ನಾಥ್ ಜಿ.ಎಚ್. ಪಿ.ಟಿ.ಎಸ್ ತಣಿಸಂದ್ರ, ಎಚ್.ಪಿ ಶಿವಕುಮಾರ್ ಡಿ.ವೈ.ಎಸ್ಪಿ ಬೆಂಗಳೂರು ಕೇಂದ್ರ ವಲಯ ಮೊದಲಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Recent Comments
ಕಗ್ಗದ ಸಂದೇಶ
on