ಉಡುಪಿ : ಜಿಲ್ಲೆಗೆ ಕೇಂದ್ರ ಸರಕಾರದ ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಬರಲಿದ್ದು, ಅದರ ವಿಸ್ಕೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸರಕಾರಿ ಸ್ವಾಮ್ಯದ ಸಂಸ್ಥೆಯೊಂದು ಶೀಘ್ರ ಉಡುಪಿಗೆ ಬರಲಿದೆ ಎಂದು ಶಾಸಕ ರಘುಪತಿ ಭಟ್ ಮಾ. 31ರಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಯೋಜನೆ ಬಡರೋಗಿಗಳಿಗೆ ಅನುಕೂಲವಾಗುವಂತಿದ್ದರೆ ಮಾತ್ರ ಒಪ್ಪಿಗೆ ಸೂಚಿಸಲಿದ್ದೇವೆ. ಜಿಲ್ಲಾಸ್ಪತ್ರೆ ಇರುವ ಜಾಗ ಸಹಿತ 15 ಎಕರೆ ಜಮೀನು ನಗರದ ಒಳಗೆ ಲಭ್ಯವಾಗಿದ್ದು, ಕೊಳಲಗಿರಿಯಲ್ಲಿ 32 ಎಕರೆ ಮೀಸಲಿಟ್ಟಿದ್ದೇವೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ 200 ಬೆಡ್, ಜಿಲ್ಲಸ್ಪತ್ರೆಯಿಂದ 250 ಸೇರಿ ಒಟ್ಟು 450 ಬೆಡ್ಗಳು ಸೇವೆಗೆ ಸಿಗಲಿವೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯೀ ಸಮಿತಿ ಅಧ್ಯಕ್ಷ ಡಿ. ಬಾಲಕೃಷ್ಣ ಶೆಟ್ಟಿ, ಸದಸ್ಯೆ ರಶ್ಮಿ ಭಟ್, ಉಡಾ ಅಧ್ಯಕ್ಷ ಮನೋಹರ್ ಕಲ್ಮಾಡಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಉಡುಪಿಗೆ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು : ರಘುಪತಿ ಭಟ್
Recent Comments
ಕಗ್ಗದ ಸಂದೇಶ
on