ರೆಡ್‌ ಕ್ರಾಸ್‌ ಸಪ್ತಾಹ – ಮಧುಮೇಹ ಕುರಿತು ಮಾಹಿತಿ ಕಾರ್ಯಗಾರ

ಕಾರ್ಕಳ: ರೆಡ್ ಕ್ರಾಸ್ ಸಪ್ತಾಹದ ಅಂಗವಾಗಿ ಮಧುಮೇಹ ಕುರಿತಂತೆ ಮಾಹಿತಿ ಕಾರ್ಯಗಾರವನ್ನು ಮಾ.30 ರಂದು ರೆಡ್‌ ಕ್ರಾಸ್‌ ಕಾರ್ಯಾಲಯದಲ್ಲಿ ನಡೆಸಲಾಯಿತು. ಕೋಶಾಧಿಕಾರಿ ರವೀಂದ್ರನಾಥ್ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾಪತಿ ಡಾಕ್ಟರ್ ಕೆ. ರಾಮಚಂದ್ರ ಜೋಶಿ ಮಧುಮೇಹದ ಬಗ್ಗೆ ಮಾಹಿತಿ ನೀಡಿದರು. ಅವರು ಹಲವು ಸಂದರ್ಭದಲ್ಲಿ ಮಧುಮೇಹದ ಲಕ್ಷಣಗಳೇ ಇಲ್ಲದೆ ಕಾಯಿಲೆ ಬರುತ್ತದೆ. ಕಾಲ ಕಾಲಕ್ಕೆ ಮಧುಮೇಹ ಕುರಿತಂತೆ ರಕ್ತ ಪರಿಶೀಲನೆ ಮಾಡುವುದರಿಂದ ಅದನ್ನು ನಿಯಂತ್ರಣದಲ್ಲಿಡಬಹುದು, ಜೊತೆಗೆ ಆಹಾರ ಪದ್ಧತಿಯ ಬದಲಾವಣೆಯಿಂದ ನಿಯಂತ್ರಣ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಶಶಿಕಲಾ ಕೆ., ಪ್ರದೀಪ್ ನಾಯಕ್ ಉಪಸ್ಥಿತರಿದ್ದರು. ಉಪಸಭಾಪತಿ ಶೇಖರ್ ಎಚ್. ಸ್ವಾಗತಿಸಿ, ವಸಂತ್ ಎಮ್. ವಂದಿಸಿದರು. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.





























































































































































































































error: Content is protected !!
Scroll to Top