Tuesday, May 17, 2022
spot_img
Homeದೇಶವಿದ್ಯಾರ್ಥಿ ಮಿತ್ರರು ಒತ್ತಡಕ್ಕೆ ಒಳಗಾಗಬಾರದು : ಪ್ರಧಾನಿ ಮೋದಿ

ವಿದ್ಯಾರ್ಥಿ ಮಿತ್ರರು ಒತ್ತಡಕ್ಕೆ ಒಳಗಾಗಬಾರದು : ಪ್ರಧಾನಿ ಮೋದಿ

ನವದೆಹಲಿ: ಆತಂಕದಿಂದ ದೂರವಿರಿ, ಹಬ್ಬದ ಮೂಡ್ ನಲ್ಲಿಯೇ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಅವರು ಸಲಹೆ ನೀಡಿದ್ದಾರೆ.
ಪರೀಕ್ಷಾ ಪೆ ಚರ್ಚಾ ಸಂವಾದ ಕಾರ್ಯಕ್ರಮ‌ದಲ್ಲಿ ವಿದ್ಯಾರ್ಥಿಗಳ ಜೊತೆ ಮಾತನಾಡಿದ ಅವರು, ನೀವು ಮೊದಲ ಬಾರಿಗೆ ಪರೀಕ್ಷೆಗಳನ್ನು ಬರೆಯುತ್ತಿಲ್ಲ. ಸಾಕಷ್ಟು ಪರೀಕ್ಷೆಗಳನ್ನು ಬರೆದಿದ್ದೀರಿ. ಹೀಗಾಗಿ, ಒತ್ತಡಕ್ಕೆ ಒಳಗಾಗಬೇಡಿ ಎಂದು ಹೇಳಿದರು.
ಪರೀಕ್ಷೆಗಳು ಜೀವನದ ಮೆಟ್ಟಿಲು. ಯಾವುದೇ ಒತ್ತಡಕ್ಕೆ ಒಳಗಾಗದೇ ನಿಮ್ಮ ಮುಂಬರುವ ಪರೀಕ್ಷೆಯ ಸಮಯವನ್ನು ಸುಲಭವಾಗಿ ಕಳೆಯಿರಿ ಎಂದು ಸಲಹೆ ನೀಡಿದರು. ನಕಲು ಮಾಡುವುದರಿಂದ ದೂರವಿರಿ. ನಮ್ಮ ಮನಸ್ಸು ನಮಗೆ ಮೋಸ ಮಾಡಲು ಬಿಡಬಾರದು. ನಮ್ಮ ಅಭಿವೃದ್ಧಿ‌ಗೆ ಪೂರಕವಾದ ವಿಷಯಗಳಿಗೆ ಹೆಚ್ಚು ಗಮನ ನೀಡಬೇಕು. ಕಲಿಕೆಯ ಮಾಧ್ಯಮ ಸಮಸ್ಯೆಯಾಗಬಾರದು ಎಂದು ತಿಳಿಸಿದರು.
ಪ್ರತಿ ಮಗುವೂ ಅಸಾಮಾನ್ಯ ಪ್ರತಿಭೆಯನ್ನು ಹೊಂದಿರುತ್ತದೆ. ಇದನ್ನು ಪೋಷಕರು ಮತ್ತು ಶಿಕ್ಷಕರು ಕಂಡುಕೊಳ್ಳಬೇಕಿದೆ. ಶಿಕ್ಷಕರು ಹಾಗೂ ಪೋಷಕರ ಒತ್ತಡಕ್ಕೆ ಒಳಗಾಗಿದ್ದೇವೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರಬಾರದು. ತಮ್ಮ ಭವಿಷ್ಯವನ್ನು ಸ್ವತಂತ್ರವಾಗಿ ನಿರ್ಧರಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!