Thursday, May 19, 2022
spot_img
Homeದೇಶ2022 - 23 : ಜಲಜೀವನ್ ಮಿಷನ್‌ಗೆ 60,000 ಕೋ. ರೂ. ಅನುದಾನ

2022 – 23 : ಜಲಜೀವನ್ ಮಿಷನ್‌ಗೆ 60,000 ಕೋ. ರೂ. ಅನುದಾನ

ನವದೆಹಲಿ : ಜಲಜೀವನ್ ಮಿಷನ್‌ಗೆ ಸಂಬಂಧಿಸಿದಂತೆ ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಾಲಿನ ಬಜೆಟ್‌ನಲ್ಲಿ 40 ಸಾವಿರ ಕೋಟಿಗೂ ಅಧಿಕ ಅನುದಾನ ಕಾಯ್ದಿರಿಸಲಾಗಿದೆ.

ಈ ಅನುದಾನ‌ವನ್ನು ರಾಜ್ಯ‌ಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮನೆಗೆ ಟ್ಯಾಪ್ ವಾಟರ್ ಸಂಪರ್ಕ ಒದಗಿಸುವುದಕ್ಕಾಗಿ ಬಳಕೆ ಮಾಡುವ ಫಲಿತಾಂಶ‌ದ ಆಧಾರದ ಮೇಲೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಮಾಡಲಾಗಿದೆ. 2022 – 23 ನೇ ಸಾಲಿನ ಅನುದಾನ‌ವನ್ನು 60 ಸಾವಿರ ಕೋಟಿ ರೂ. ಗಳಿಗೆ ಏರಿಕೆ ಮಾಡಲಾಗಿದೆ ಎಂದು ಜಲಶಕ್ತಿ ಸಚಿವಾಲಯ‌ದ ಪ್ರಕಟಣೆ ತಿಳಿಸಿದೆ.

ಕೊರೋನಾ, ಲಾಕ್ಡೌನ್ ಹೊರತಾಗಿ‌ಯೂ ಕಳೆದೆರಡು ವರ್ಷದಲ್ಲಿ ಜಲ ಜೀವನ್ ಮಿಷನ್ ಗಮನಾರ್ಹ ಯಶಸ್ಸು ಸಾಧಿಸಿದೆ. ಈ ವಾರ್ಷಿಕ ಅವಧಿಯಲ್ಲಿ 2.06 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬ‌ಗಳಿಗೆ ಈ ಯೋಜನೆಯಡಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. 2019 ಆಗಸ್ಟ್ 15 ರಂದು ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಈ ವರೆಗೂ 6 ಕೋಟಿಗೂ ಹೆಚ್ಚು ಕುಟುಂಬ‌ಗಳು ನಲ್ಲಿ ನೀರಿನ ಸಂಪರ್ಕ ಪಡೆಯುವಂತಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!