ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಕ್ಕೆ ಮೊಗವೀರ ಗ್ರಾಮ ಸಭಾ ಹೆಬ್ರಿ ವತಿಯಿಂದ ಎ. 1ರಂದು ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಹೊರೆಕಾಣಿಕೆ ಒಯ್ಯುವ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು.
ಹೆಬ್ರಿಯ ಉದ್ಯಮಿ ಎಚ್. ಪ್ರವೀಣ್ ಬಲ್ಲಾಳ್, ಸಮಾಜ ಸೇವಕ ಎಚ್. ಭಾಸ್ಕರ ಜೋಯಿಸ್, ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಸದಸ್ಯ ಎಚ್. ಜನಾರ್ಧನ್ ಕುಚ್ಚೂರು, ಶಾಂತಿನಿಕೇತನ ಯುವವೃಂದದ ಅಧ್ಯಕ್ಷ ರಾಜೇಶ್ ಹಾಗೂ ಸರ್ವಸದಸ್ಯರು, ಮೊಗವೀರ ಗ್ರಾಮ ಸಭಾ ಹೆಬ್ರಿಯ ಅಧ್ಯಕ್ಷ, ಹೆಬ್ರಿ ಗ್ರಾಪಂ ಸದಸ್ಯ ಎಚ್. ಬಿ. ಸುರೇಶ್, ಆನಂದ ಮರಕಾಲ, ಗುರಿಕಾರ ವಿಠ್ಠಲ ಮರಕಾಲ ಹಾಗೂ ಮೊಗವೀರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹೆಬ್ರಿಯಲ್ಲಿ ಹೊರೆಕಾಣಿಕೆ ಸಮರ್ಪಣೆ
Recent Comments
ಕಗ್ಗದ ಸಂದೇಶ
on