ಬೆಂಗಳೂರು: ‘ಹಲೋ ಕಂದಾಯ ಸಚಿವರೇ’ ಯೋಜನೆ ರಾಜ್ಯದಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.
ಈ ಸಂಬಂಧ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದು, ಈ ಯೋಜನೆಯ ಮೂಲಕ ಪಿಂಚಮಣಿದಾರರು ‘ಹಲೋ ಕಂದಾಯ ಸಚಿವರೇ ಸಹಾಯವಾಣಿ’ಗೆ ಕರೆ ಮಾಡಿದ 72 ಗಂಟೆಗಳಲ್ಲೇ ಮನೆ ಬಾಗಿಲಿಗೆ ಮಂಜೂರಾತಿ ಪತ್ರ ತಲುಪಲಿದೆ ಎಂದು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳ ವಯೋಮಿತಿ ದಾಖಲೆ, ಆದಾಯ ಮಾಹಿತಿಗಳನ್ನೊಳಗೊಂಡಂತೆ ಎಲ್ಲಾ ಅಗತ್ಯ ದಾಖಲೆಗಳು ಕಂದಾಯ ಇಲಾಖೆಯಲ್ಲಿ ಲಭ್ಯವಿದೆ. ಆಧಾರ್ ಸಂಖ್ಯೆ ನಮೂದು ಮಾಡುವ ಮೂಲಕ ಈ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗದೇ ಇರುವ ಫಲಾನುಭವಿಗಳು ಹೊಸ ಸಹಾಯವಾಣಿಗೆ ಕರೆ ಮಾಡಬಹುದು. ಕರೆ ಮಾಡಿದ ಒಂದು ದಿನದೊಳಗಾಗಿ ಮಾಸಾಶನ ಮಂಜೂರಾತಿ ಆದೇಶ ಪ್ರತಿ ಮನೆಗೆ ತಲುಪುತ್ತದೆ ಎಂದು ಅಶೋಕ್ ಹೇಳಿದ್ದಾರೆ.
ರಾಜ್ಯದಲ್ಲಿ ಶೀಘ್ರದಲ್ಲೇ ಜಾರಿಯಾಗಲಿದೆ ‘ಹಲೋ ಕಂದಾಯ ಸಚಿವರೇ’ ಯೋಜನೆ
Recent Comments
ಕಗ್ಗದ ಸಂದೇಶ
on