Tuesday, May 17, 2022
spot_img
Homeದೇಶಶ್ರೀನಗರ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ವಧೆ

ಶ್ರೀನಗರ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ವಧೆ

ಶ್ರೀನಗರ :  ರೆಸಿಸ್ಟೆಂಟ್ ಫ್ರಂಟ್ ಉಗ್ರಗಾಮಿ ಸಂಘಟನೆಗಳ ಇಬ್ಬರು ಉಗ್ರಗಾಮಿಗಳು ಬುಧವಾರ ನಸುಕಿನ ಜಾವ ಶ್ರೀನಗರದ ರೈನವರಿ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗಿದ್ದಾರೆ.

ಹತ್ಯೆಗೀಡಾದ ಇಬ್ಬರು ಉಗ್ರರು ಇತ್ತೀಚಿನ ದಿನಗಳಲ್ಲಿ ನಾಗರಿಕರ ಹತ್ಯೆ ಸೇರಿದಂತೆ ಹಲವು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ತಿಳಿಸಿದ್ದಾರೆ.

ಸ್ಥಳದಿಂದ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೀಡಾದ ಉಗ್ರರಲ್ಲಿ ಓರ್ವ ರಯೀಸ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು ಈತ ಈ ಹಿಂದೆ ಪತ್ರಕರ್ತನಾಗಿದ್ದು ಆನ್ ಲೈನ್ ನ್ಯೂಸ್ ಪೋರ್ಟಲ್ ವ್ಯಾಲಿ ನ್ಯೂಸ್ ಸರ್ವಿಸ್ ಎಂಬುದನ್ನು ಅನಂತ್ ನಾಗ್ ನಲ್ಲಿ ನಡೆಸುತ್ತಿದ್ದ. 2021ರಲ್ಲಿ ಕಳೆದ ವರ್ಷ ಆತನನ್ನು ಉಗ್ರ ಎಂದು ಘೋಷಣೆ ಮಾಡಲಾಗಿತ್ತು. ಈತನ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದ್ದವು. 

ಇನ್ನೊಬ್ಬ ಉಗ್ರನನ್ನು ಬಿಜ್ಬೆಹರದ ಹಿಲಾಲ್ ಅಹ್ ರಾ ಎಂದು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!