ಕುವೈಟ್ : ಕೊರೊನಾ ಕಾಲದಲ್ಲಿ ಸೇವೆ ಸಲ್ಲಿಸಿದ ನರ್ಸ್ಗಳನ್ನು ಅಭಿನಂದಿಸಲು ಹಾಗೂ ಪ್ರೋತ್ಸಾಹಿಸಲು ಏಷ್ಯಾನೆಟ್ ನ್ಯೂಸ್ ವತಿಯಿಂದ ಕುವೈಟ್ನಲ್ಲಿ ಮಾ. 28ರಂದು ಆಯೋಜಿಸಿದ್ದ ಏಷ್ಯಾನೆಟ್ ನ್ಯೂಸ್ ನರ್ಸಿಂಗ್ ಎಕ್ಸಲೆನ್ಸ್ ಅವಾರ್ಡ್(Nursing Excellence Awards 2022) ಕಾರ್ಯಕ್ರಮದಲ್ಲಿ ಐವರು ಭಾರತೀಯ ನರ್ಸ್ಗಳಿಗೆ ಅತ್ಯುತ್ತಮ ನರ್ಸ್ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.
ಕುವೈಟ್ನ ಸಭಾ ಆಸ್ಪತ್ರೆಯಲ್ಲಿ ಕಳೆದ 43 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಸಾನ್ ಜೇಕಬ್ ಅಬ್ರಹಾಂಗೆ ಜೀವಮಾನ ಸಾಧನೆ ಪ್ರಶಸ್ತಿ, ನಿಸ್ವಾರ್ಥ ಸೇವೆ ನೀಡಿದ ಶೈನಿ ಅನಿಲ್ ಜೇಕಬ್ಗೆ ವರ್ಷದ ನರ್ಸ್ ಪ್ರಶಸ್ತಿ, ಶವಾಗಾರದಲ್ಲಿ ಮತೃದೇಹಗಳಿಗೆ ಎಂಬಾಮ್ ಮಾಡಿ ನೆರವಾಗುತ್ತಿದ್ದ ಸುಜಾ ಲಾಜಿ ಜೋಸೆಫ್ಗೆ ನರ್ಸಿಂಗ್ ಅಡ್ಮಿನಿಸ್ಟ್ರೇಟರ್ ಪ್ರಶಸ್ತಿ, ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಸಾವಿರಾರು ರೋಗಿಗಳ ಸೇವೆ ಸಲ್ಲಿಸಿದ ಸಭಾ ಆಸ್ಪತ್ರೆಯ ವಿಜೇಶ್ ವೇಲಾಯುಧನ್ಗೆ ಕೋವಿಡ್ ವಾರಿಯರ್ ಪ್ರಶಸ್ತಿ, ರಾಯ್ ಕೆ ಯೋಹಾನಾಗೆ ಸ್ಪೆಷಲ್ ಜ್ಯೂರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕುವೈಟ್ನ ಭಾರತೀಯ ರಾಯಭಾರಿ ಸಿಬಿ ಜಾರ್ಜ್ ಪ್ರಶಸ್ತಿ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಸಿಬಿ ಜಾರ್ಜ್, ಕುವೈಟ್ನಲ್ಲಿನ ಭಾರತೀಯ ನರ್ಸ್ಗಳ ಸೇವೆಯನ್ನು ಭಾರತ ಹಾಗು ಕುವೈಟ್ ಮರೆಯಲು ಸಾಧ್ಯವಿಲ್ಲ. ನಿಸ್ವಾರ್ಥ ಸೇವೆ ಪ್ರಶಸ್ತಿ ಪಡೆದ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ನರ್ಸ್ಗಳಿಗೆ ರಾಯಭಾರಿ ಸಿಬಿ ಜಾರ್ಜ್ ಅಭಿನಂದನೆ ಸಲ್ಲಿಸಿದರು.
ಸುಮಾರು 5,000 ಹೆಚ್ಚಿನ ನರ್ಸ್ಗಳಲ್ಲಿ ಐವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಎಲ್ಲರೂ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ ಪ್ರಶಸ್ತಿಗಾಗಿ ಐವರ ಆಯ್ಕೆಗಾಗಿ ಹಲವು ಮಾನದಂಡಗಳನ್ನು ರೂಪಿಸಿ ಅದರಂತೆ ಆಯ್ಕೆ ಮಾಡಿದ್ದೇವೆ. ನರ್ಸ್ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಈ ಪ್ರಶಸ್ತಿಗೆ ಅರ್ಹರೂ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.
ಕುವೈಟ್: ಐವರು ಭಾರತೀಯ ದಾದಿಯರಿಗೆ ‘ಅತ್ಯುತ್ತಮ ನರ್ಸ್ ಸೇವಾ ಪ್ರಶಸ್ತಿ’
Recent Comments
ಕಗ್ಗದ ಸಂದೇಶ
on