Saturday, May 21, 2022
spot_img
Homeಸುದ್ದಿಉತ್ತರ ಪ್ರದೇಶ : ಖಾತೆ ಹಂಚಿಕೆ ಮಾಡಿದ ಸಿಎಂ ಯೋಗಿ

ಉತ್ತರ ಪ್ರದೇಶ : ಖಾತೆ ಹಂಚಿಕೆ ಮಾಡಿದ ಸಿಎಂ ಯೋಗಿ

ಲಕ್ನೋ: ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಗದ್ದುಗೆಗೇರಿರುವ ಯೋಗಿ ಆದಿತ್ಯ‌ನಾಥ್ ಅವರು, ಖಾತೆ ಹಂಚಿಕೆ ನಡೆಸಿದ್ದಾರೆ.

ಬಹುಪಾಲು ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿರುವ ಅವರು, ಉಪಮುಖ್ಯಮಂತ್ರಿ ಕೇಶವ ಮೌರ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಖಾತೆ, ರೂರಲ್ ಎಂಜಿನಿಯರಿಂಗ್, ಆಹಾರ ಸಂಸ್ಕರಣೆ, ಮನರಂಜನಾ ತೆರಿಗೆ ಖಾತೆಗಳನ್ನು ನೀಡಿದ್ದಾರೆ. ಮತ್ತೊಬ್ಬ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ಬೇಬಿ ರಾಣಿ ಮೌರ್ಯ ಅವರಿಗೆ, ಡೈರಿ ಅಭಿವೃದ್ಧಿ ಖಾತೆಯನ್ನು ಧರ್ಮಪಾಲ್ ಸಿಂಗ್ ಅವರಿಗೆ, ಪ್ರವಾಸೋದ್ಯಮ‌ವನ್ನು ಜೈವೀರ್ ಸಿಂಗ್ ಅವರಿಗೆ ಹಂಚಿಕೆ ಮಾಡಲಾಗಿದೆ. ಲೋಕೋಪಯೋಗಿ‌ಗೆ ಜಿತಿನ್ ಪ್ರಸಾದ್, ಕೈಗಾರಿಕಾ‌ಭಿವೃದ್ಧಿಗೆ ನಂದಗೋಪಾಲ್, ಮೀನುಗಾರಿಕಾ ಖಾತೆಗೆ ಸಂಜಯ್ ನಿಶಾದ್, ತಾಂತ್ರಿಕ ಶಿಕ್ಷಣ‌ ಖಾತೆಗೆ ಅಶೀಶ್ ಪಠೇಲ್, ಅಬಕಾರಿ ಖಾತೆಗೆ ನಿತಿನ್ ಅಗರ್ವಾಲ್, ಸಮಾಜ ಕಲ್ಯಾಣ ಖಾತೆಗೆ ಅಸೀಮ ಅರುಣ್, ಸಾರಿಗೆಗೆ ದಯಾಶಂಕರ್ ಸಿಂಗ್, ಅಲ್ಪಸಂಖ್ಯಾತ‌ ಕಲ್ಯಾಣ ಖಾತೆಯನ್ನು ಡ್ಯಾನಿಷ್ ಅಜಾದ್ ಅವರಿಗೆ ಹಂಚಿಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!