ತುಮಕೂರು: 2021ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದ, 25ರ ಯುವತಿಯನ್ನು ಮದುವೆಯಾಗಿದ್ದ 45 ವರ್ಷದ ವ್ಯಕ್ತಿಯ ಮೃತದೇಹ ಮಾ. 29ರ ಮುಂಜಾನೆ ನೇಣುಬಿಗದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಂಕರಣ್ಣ (45) ಮೃತ ದುರ್ದೈವಿಯಾಗಿದ್ದು, ಕಳೆದ ವರ್ಷ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ನಡೆದಿತ್ತು. ಮೂರ್ನಾಲ್ಕು ದಿನಗಳಿಂದ ಅತ್ತೆ- ಸೊಸೆ ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆಯುತ್ತಿದ್ದು ಬೇಸತ್ತ ಶಂಕರಣ್ಣ ಬೆಳಗ್ಗೆ ಹೊಲಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದಲ್ಲಿದ್ದ ತಮ್ಮ ತೋಟದ ಮರದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
2021ರಲ್ಲಿ ಮದುವೆಯಾಗಿದ್ದ ಈ ದಂಪತಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ತುಮಕೂರು: 25 ವರ್ಷದ ಯುವತಿಯನ್ನು ವಿವಾಹವಾಗಿದ್ದ ಶಂಕರಣ್ಣ ಆತ್ಮಹತ್ಯೆ
Recent Comments
ಕಗ್ಗದ ಸಂದೇಶ
on