Thursday, May 19, 2022
spot_img
Homeದೇಶಕಾಂಗ್ರೆಸ್‌ ಬಲಿಷ್ಠವಾಗಬೇಕು - ಪ್ರಜಾಪ್ರಭುತ್ವಕ್ಕೆ ಪ್ರತಿಪಕ್ಷ ಬೇಕು : ನಿತಿನ್‌ ಗಡ್ಕರಿ

ಕಾಂಗ್ರೆಸ್‌ ಬಲಿಷ್ಠವಾಗಬೇಕು – ಪ್ರಜಾಪ್ರಭುತ್ವಕ್ಕೆ ಪ್ರತಿಪಕ್ಷ ಬೇಕು : ನಿತಿನ್‌ ಗಡ್ಕರಿ

ಮುಂಬಯಿ : ”ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್‌ ಪಕ್ಷದ ಅವಶ್ಯಕತೆ ಇದೆ. ಹಾಗಾಗಿ ದೇಶದಲ್ಲಿ ಆ ಪಕ್ಷವು ಮತ್ತಷ್ಟು ಬಲಿಷ್ಠವಾಗಲಿ ಎಂದು ಮನಸಾರೆ ಹಾರೈಸುತ್ತೇನೆ” ಎಂದು ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಪ್ರಜಾಪ್ರಭುತ್ವವು ಆಡಳಿತ ವ್ಯವಸ್ಥೆ ಹಾಗೂ ಪ್ರತಿಪಕ್ಷ ಎಂಬ ಎರಡು ಚಕ್ರಗಳ ಮೇಲೆ ಸಾಗುತ್ತಿರುತ್ತದೆ. ಹಾಗಾಗಿ ಬಲಿಷ್ಠ ಪ್ರತಿಪಕ್ಷವು ಅತ್ಯವಶ್ಯವಾಗಿದೆ. ಇದಕ್ಕಾಗಿ ಕಾಂಗ್ರೆಸ್‌ ಮತ್ತಷ್ಟು ಬಲಿಷ್ಠವಾಗಲಿ ಎಂದು ತಿಳಿಸಿದ್ದಾರೆ.
ಈಗ ಪಕ್ಷ ಸರಣಿ ಸೋಲು ಅನುಭವಿಸಿದ್ದರೂ ಮುಂದಿನ ದಿನಗಳಲ್ಲಿ ಜಯ ಇದ್ದೇ ಇರುತ್ತದೆ. ಹೀಗಾಗಿ ಯಾವ ನಾಯಕರೂ ಕಾಂಗ್ರೆಸ್‌ ಪಕ್ಷವನ್ನು ಬಿಡಬಾರದು ಎಂದು ಸಲಹೆ ನೀಡಿದ್ದಾರೆ.
ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು ಎಂದು ಇಡೀ ದೇಶದಲ್ಲಿ ಬಿಜೆಪಿಯ ಕೂಗು ಎದ್ದಿರುವಾಗಲೇ ಬಿಜೆಪಿಯ ಪ್ರಭಾವಿ ನಾಯಕರು ಈ ರೀತಿಯ ಹೇಳಿಕೆ ನೀಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!