ಬೆಂಗಳೂರು : ಮಾ. 28 ಕ್ಕೆ ದಾಖಲಾದ ಮಾಹಿತಿಯಂತೆ, ರಾಜ್ಯದ 30 ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿ ಶೂನ್ಯ ಕೋವಿಡ್ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರ, ಚಿತ್ರದುರ್ಗ, ಕೋಲಾರ, ಮೈಸೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಶೂನ್ಯ ಕೊರೋನಾ ಸೋಂಕಿತರ ಪ್ರಕರಣಗಳು ದಾಖಲಾಗಿದೆ.
ಮೂರನೇ ಅಲೆಯ ವೇಳೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯ ಇಳಿಮುಖವಾಗುತ್ತಿದೆ. 2022 ರ ಜನವರಿ 1 ರಂದು 9,386 ರಷ್ಟಿದ್ದ ಸೋಂಕಿತರ ಪ್ರಮಾಣ, ಜನವರಿ 24 ರ ವೇಳೆಗೆ 3,62,487ಕ್ಕೆ ಏರಿಕೆಯಾಗಿತ್ತು. . ಮಾ. 28 ಕ್ಕೆ ಈ ಸಂಖ್ಯೆ 1,719 ಗಳಿಗೆ ಇಳಿದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.