ಕಾರ್ಕಳ : ಕಾರ್ಕಳ – ಬಜಗೋಳಿ- ಮಾಳ ರಸ್ತೆ ಅಭಿವೃದ್ಧಿಗೆ 180 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. 18 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಅನುದಾನ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಸುನಿಲ್ ಕುಮಾರ್ ತಿಳಿಸಿದರು.
ಚತುಷ್ಫಥ ರಸ್ತೆ ನಿರ್ಮಾಣದಿಂದ ಶೃಂಗೇರಿ, ಧರ್ಮಸ್ಥಳ ಯಾತ್ರಿಕರಿಗೆ ಅನುಕೂಲವಾಗಲಿದೆ. ಕುದುರೆಮುಖ, ಶೃಂಗೇರಿ, ಕಳಸ, ಹೊರನಾಡು, ಜಿಲ್ಲಾ ಕೇಂದ್ರ ಚಿಕ್ಕಮಗಳೂರು ಸಂಪರ್ಕಿಸಲು ಕರಾವಳಿ ಭಾಗದ ಜನತೆ ಈ ರಸ್ತೆ ಮೂಲಕ ಸುಗಮ ಸಂಚಾರ ನಡೆಸಬಹುದಾಗಿದೆ. ಚತುಷ್ಫಥ ರಸ್ತೆಯಾಗುತ್ತಿರುವುದರಿಂದ ನಿಶ್ವಿತ ಸ್ಥಳವನ್ನು ವೇಗವಾಗಿಯೂ ತಲುಪಬಹುದಾಗಿದೆ.
ವಿ. ಸುನಿಲ್ ಕುಮಾರ್