ಕಾರ್ಕಳ : ಅದಮಾರು ಮಠದ ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥ ಶ್ರೀಪಾದರು ಐತಿಹಾಸಿಕ ಹಿನ್ನೆಲೆಯುಳ್ಳ ಕಾರ್ಕಳದ ತಾವರೆಕೆರೆಯಲ್ಲಿ ತಾವರೆ ಗಿಡಗಳನ್ನು ನೆಡುವ ಮೂಲಕ ಮಾ. 27ರಂದು ಚಾಲನೆ ನೀಡಿದರು.
ಕಾರ್ಕಳದ ಪ್ರಸಿದ್ಧ ತಾವರೆಕೆರೆಯಲ್ಲಿ ತಾವರೆಗಳು ಕ್ಷೀಣಿಸುತ್ತಿರುವುದನ್ನು ಮನಗಂಡು ವಿವಿಧ ಜಾತಿಯ ತಾವರೆ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರದೀಪ್ ರಾಣೆ, ತಾ.ಪಂ. ಮಾಜಿ ಸದಸ್ಯ ಪ್ರವೀಣ್ ಕೋಟ್ಯಾನ್, ಉದ್ಯಮಿ ಹರಿಪ್ರಕಾಶ್ ಶೆಟ್ಟಿ, ಪದ್ಮನಾಭ ಗಡಿಯಾರ್, ನ್ಯಾಯವಾದಿ ವಿನೀತ್ ಕುಮಾರ್, ರಘುರಾಮ್ ಕಾರಂತ್, ಸೌಜನ್ಯ ಉಪಧ್ಯಾಯ, ಪುರುಷೋತ್ತಮ್ ಅಡ್ವೆ, ಅಬೂಬಕ್ಕರ್, ಶಿಕ್ಷಕಿ ಅಸ್ಮಾ ಭಾನು, ಧನುಷ್ ಬಜಗೋಳಿ, ಜನಾರ್ದನ ಗೌಡ, ಭಾಸ್ಕರ್ ಭಟ್ ಉಪಸ್ಥಿತರಿದ್ದರು.
