Saturday, May 21, 2022
spot_img
Homeಸ್ಥಳೀಯ ಸುದ್ದಿಅನ್ಯಮತೀಯರ ಬೀದಿ ಬದಿ ವ್ಯಾಪಾರ ನಿಷೇಧ ಸಂವಿಧಾನ ವಿರೋಧಿ ಕಾರ್ಯ

ಅನ್ಯಮತೀಯರ ಬೀದಿ ಬದಿ ವ್ಯಾಪಾರ ನಿಷೇಧ ಸಂವಿಧಾನ ವಿರೋಧಿ ಕಾರ್ಯ

ಧರ್ಮದ ಹೆಸರಲ್ಲಿ ಹೊಟ್ಟೆಗೆ ಹೊಡೆಯುವುದು ಹಿಂದೂ ಧರ್ಮದ ವಿಶ್ವಕುಟುಂಬ ಚಿಂತನೆಗೆ ಮಾರಕ – ಬಿಪಿನ್‌ಚಂದ್ರ ಪಾಲ್‌

ಕಾರ್ಕಳ : ಹಿಂದೂ ದೇವಸ್ಥಾನಗಳ ಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರ ಬೀದಿಬದಿ ವ್ಯಾಪಾರವನ್ನು ಕೆಲವೊಂದು ಸಂಘಟನೆಗಳು ಬಲತ್ಕಾರವಾಗಿ ನಿಷೇಧಿಸುತ್ತಿರುವುದು ಸಂವಿಧಾನ ವಿರೋಧಿಯಾಗಿದೆ. ಇದು ಹಿಂದೂ ಧರ್ಮ ಪ್ರತಿಪಾದನೆ ಮಾಡಿಕೊಂಡು ಬಂದಿರುವ ವಿಶ್ವಕುಟುಂಬ ಚಿಂತನೆಗೆ ಮಾರಕ ಎಂದು ಕಾಂಗ್ರೆಸ್‌ ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ಪಾಲ್‌ ನಕ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಆಳುವ ಸರಕಾರದ ಮೌನ ರಾಜ್ಯದಲ್ಲಿ ತಾಂಡವವಾಡುತ್ತಿರುವ ಸಾಮಾಜಿಕ, ರಾಜಕೀಯ ಅರಾಜಕತೆಗೆ ಸಾಕ್ಷಿಯಾಗಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ಧತ್ತಿ ಇಲಾಖೆಯ 2002ರ ನಿಯಮಾವಳಿಗಳು ಹಿಂದೂ ದೇವಾಲಯಗಳ ಆಸ್ತಿಯನ್ನು ಅನ್ಯಮತೀಯರಿಗೆ ಗುತ್ತಿಗೆ ನೀಡುವುದನ್ನು ನಿಷೇಧಿಸುತ್ತದೆಯೇ ಹೊರತು ದೇವಸ್ಥಾನಗಳ ಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರು ಮಾಡುವ ಬೀದಿಬದಿ ವ್ಯಾಪಾರವನ್ನಲ್ಲ. ಬೀದಿಬದಿ ವ್ಯಾಪಾರ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ- 2014ರ ಕಾಯ್ದೆ ಹಾಗೂ ಕರ್ನಾಟಕ ಸರಕಾರ ಬೀದಿಬದಿ ವ್ಯಾಪಾರ ಅಧಿನಿಯಮ 2019- 2020 ರಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕಾನೂನಾತ್ಮಕ ಭದ್ರತೆಯಿದ್ದು, ಧರ್ಮದ ಹಸರಲ್ಲಿ ಅವರ ಹೊಟ್ಟೆಗೆ ಹೊಡೆಯುವುದು ಕಾನೂನು ಬಾಹಿರವಾಗಿದ್ದು ಇವರಿಗೆ ಭದ್ರತೆ ಒದಗಿಸುವಲ್ಲಿ ಸರಕಾರ ಎಡವಿದೆ ಎಂದು ಅವರು ಹೇಳಿದ್ದಾರೆ.

ಪರಸ್ಪರ ದೋಷಾರೋಪಗಳನ್ನು ಇತ್ಯರ್ಥ ಪಡಿಸಿ ಸೌಹಾರ್ದಯುತವಾಗಿ ಬಗೆಹರಿಸಬಹುದಾಗಿದ್ದ ಸಮಸ್ಯೆಯೊಂದು ದೇಶದ ಸಂವಿಧಾನದತ್ತ ಜಾತ್ಯತೀತತೆಯ ಸಿದ್ಧಾಂತವನ್ನೆ ಬುಡಮೇಲು ಮಾಡುವ ಮಟ್ಟಕ್ಕೆ ಬೆಳೆದಿರುವುದು ವಿಷಾದನೀಯ. ಈ ಪ್ರಜಾತಂತ್ರ ವಿರೋಧಿ ಬೆಳವಣಿಗೆಗೆ ಕೇಂದ್ರ ರಾಜ್ಯ ಮತ್ತು ಸ್ಥಳೀಯಾಡಳಿತಗಳೇ ನೇರ ಹೊಣೆ ಎಂದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!