Thursday, May 26, 2022
spot_img
Homeಸುದ್ದಿಏರಿಕೆ ಕಂಡ ಪೆಟ್ರೋಲ್‌ - ಡೀಸೆಲ್ ಬೆಲೆ

ಏರಿಕೆ ಕಂಡ ಪೆಟ್ರೋಲ್‌ – ಡೀಸೆಲ್ ಬೆಲೆ

ನವದೆಹಲಿ : ಆರು ದಿನಗಳಲ್ಲಿ ಐದನೇ ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಏರಿಕೆ ಕಂಡಿದ್ದು, ಮಾ. 27ರಂದು ಬೆಲೆಯಲ್ಲಿ 50 ಪೈಸೆ ಹೆಚ್ಚಳವಾಗಿದೆ.
ಈ ಮೂಲಕ ಕಡಲ ನಗರಿ ಮಂಗಳೂರಿನಲ್ಲಿ ಪೆಟ್ರೋಲ್ ದರ 103.74 ರೂ. ಆದರೆ ಡೀಸೆಲ್ 87.99 ರೂ. ಗೆ ಏರಿಕೆ ಕಂಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ರೂ. 104.46, ಡೀಸೆಲ್‌ ಗೆ 88.67 ರೂ. ಆಗಿದೆ.
ದೆಹಲಿಯಲ್ಲಿ ಪೆಟ್ರೋಲ್‌ ಲೀಟರ್‌ ಗೆ 99.11 ರೂ. ಡೀಸೆಲ್‌ 55 ಪೈಸೆ ಏರಿಕೆಯಾಗುವುದರೊಂದಿಗೆ ಲೀಟರ್‌ ಗೆ 90.42 ರೂ. ಗೆ ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್‌ ಮತ್ತು ಡಿಸೆಲ್‌ ಬೆಲೆ ಕ್ರಮವಾಗಿ 53 ಪೈಸೆ ಮತ್ತು 58 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್‌ 113.88, ಡೀಸೆಲ್‌ ಬೆಲೆ 98.13 ರೂ. ಇದೆ. ಮಂಗಳವಾರದಿಂದ ಇಂಧನ ಬೆಲೆಯಲ್ಲಿ 3.20 ರೂ. ಗೂ ಅಧಿಕ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!