ಹೆಬ್ರಿ : ಹೆಬ್ರಿ ಗ್ರಾಮದ ಕುಚ್ಚೂರು ಬಳಿ ಜುಗಾರಿ ಅಡುತ್ತಿದ್ದ ಐವರನ್ನು ಹೆಬ್ರಿ ಠಾಣೆಯ ಪೊಲೀಸರು ಮಾ. 26ರಂದು ವಶಕ್ಕೆ ಪಡೆದಿದ್ದಾರೆ. ಹಣ ಪಣವಾಗಿರಿಸಿಕೊಂಡು ಗುಂಪೊಂದು ಜುಗಾರಿ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುದರ್ಶನ ದೊಡಮನಿ ತಂಡ ದಾಳಿ ನಡೆಸಿದ್ದು, ಹೆಬ್ರಿ ಹೊಸೂರಿನ ಹರೀಶ್ ಪೂಜಾರಿ (33), ಚಾರಾ ಗ್ರಾಮದ ಹಸಿಕೊಡ್ಲುವಿನ ಆಶ್ರೀತ್ (23), ಕುಚ್ಚೂರು ಗ್ರಾಮದ ಬಾಗಲ್ಜಡ್ಡು ಮಂಜುನಾಥ ಶೆಟ್ಟಿ (56), ಹೆಬ್ರಿ ಗ್ರಾಮದ ಬಚ್ಚಪ್ಪು ನಿವಾಸಿ ದಿನೇಶ್ ಪೂಜಾರಿ (36), ಇದೇ ಗ್ರಾಮದ ದೇವಸ್ಥಾನಬೆಟ್ಟು ನಿವಾಸಿ ಸುಧಾಕರ ದೇವಾಡಿಗ (52) ಅವರನ್ನು ವಶಕ್ಕೆ ಪಡೆಯಲಾಗಿದೆ.
Recent Comments
ಕಗ್ಗದ ಸಂದೇಶ
on